
ನವದೆಹಲಿ, ಅ. 27: ರೈಲು ಪ್ರಯಾಣಿಕರಿಗೆ ಬಿಗ್ ಗುಡ್ ನ್ಯೂಸ್! ಇನ್ಮುಂದೆ ಕೌಂಟರ್‌ನಲ್ಲಿ ಟಿಕೆಟ್ ತಗೊಂಡ್ರೂ ಕೂಡ ನಿಮಗೆ ₹10 ಲಕ್ಷದ ಟ್ರಾವೆಲ್ ಇನ್ಷೂರೆನ್ಸ್ ಸಿಗುತ್ತೆ! ಸುಪ್ರೀಂ ಕೋರ್ಟ್ ಆದೇಶದಂತೆ ಈ ನಿಯಮ ಇಂದಿನಿಂದಲೇ (ಅ.27) ಜಾರಿಗೆ ಬಂದಿದೆ.
ಆದ್ರೆ ಇಲ್ಲಿ ಒಂದು ಟ್ವಿಸ್ಟ್ ಇದೆ! ಅದನ್ನ ನೀವು ತಿಳ್ಕೋಲೇಬೇಕು.
ಹೊಸ ರೂಲ್ಸ್ ಏನು?
ಇನ್ಮುಂದೆ ಕೌಂಟರ್‌ನಲ್ಲಿ ಟಿಕೆಟ್ ಜೊತೆ ಇನ್ಷೂರೆನ್ಸ್ ಬೇಕು ಅಂದ್ರೆ ನೀವು *ಕ್ಯಾಶ್ ಕೊಡುವ ಹಾಗಿಲ್ಲ!* ಕೇವಲ *UPI, ಕಾರ್ಡ್, ಡಿಜಿಟಲ್ ಪೇಮೆಂಟ್* ಮಾಡಿದ್ರೆ ಮಾತ್ರ ಇನ್ಷೂರೆನ್ಸ್ ಸಿಗುತ್ತೆ. ಕ್ಯಾಶ್ ಕೊಟ್ಟು ಟಿಕೆಟ್ ತಗೊಂಡ್ರೆ ಇನ್ಷೂರೆನ್ಸ್ ಸಿಗಲ್ಲ.
ಯಾಕೆ ಈ ರೂಲ್ಸ್? 45 ಪೈಸೆ ಇನ್ಷೂರೆನ್ಸ್‌ಗೆ ಚಿಲ್ಲರೆ ಕೊಡೋದು ಕಷ್ಟ ಅಂತ ರೈಲ್ವೆ ಇಲಾಖೆ ಈ ನಿರ್ಧಾರ ತಗೊಂಡಿದೆ.
ಕೇವಲ 45 ಪೈಸೆಗೆ ₹10 ಲಕ್ಷ ಕವರೇಜ್ – ಹೇಗೆ?
– ಪ್ರೀಮಿಯಂ: ಕೇವಲ ₹0.45 ಪೈಸೆ ಮಾತ್ರ!
– ರಿಸರ್ವ್ಡ್ ಟಿಕೆಟ್‌ಗೆ ಮಾತ್ರ ಈ ಸೌಲಭ್ಯ.
– ನಾಮಿನಿ ಹೆಸರು ಸೇರಿಸಬಹುದು.
₹10 ಲಕ್ಷ ಇನ್ಷೂರೆನ್ಸ್‌ನಲ್ಲಿ ಏನೇನು ಸಿಗುತ್ತೆ?
– ಪ್ರಯಾಣದಲ್ಲಿ ದುರಂತದಲ್ಲಿ ಮರಣ ಹೊಂದಿದರೆ: ಕುಟುಂಬಕ್ಕೆ ₹10 ಲಕ್ಷ
– ಪೂರ್ಣ ಅಂಗವೈಕಲ್ಯವಾದರೆ: ₹10 ಲಕ್ಷ
– ಭಾಗಶಃ ಅಂಗವೈಕಲ್ಯವಾದರೆ: ₹7.5 ಲಕ್ಷ
– ಗಾಯಗೊಂಡು ಆಸ್ಪತ್ರೆಗೆ ಸೇರಿದರೆ: ₹2 ಲಕ್ಷ ವರೆಗೆ ಆಸ್ಪತ್ರೆ ಖರ್ಚು ಇನ್ಷೂರೆನ್ಸ್ ಕಂಪನಿಯೇ ಭರಿಸುತ್ತೆ!
ಭಾರತೀಯ ರೈಲ್ವೆ ಈಗಾಗಲೇ ದೊಡ್ಡ ಇನ್ಷೂರೆನ್ಸ್ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದೆ.
ನೀವು ಏನು ಮಾಡಬೇಕು?
ಕೌಂಟರ್‌ಗೆ ಹೋದಾಗ “ಇನ್ಷೂರೆನ್ಸ್ ಬೇಕು” ಅಂತ ಹೇಳಿ, UPI ಮೂಲಕ ಪೇ ಮಾಡಿ. 45 ಪೈಸೆ ಜಾಸ್ತಿ ಕೊಟ್ಟು ನಿಮ್ಮ ಜೀವಕ್ಕೆ ₹10 ಲಕ್ಷ ಭದ್ರತೆ ಪಡೆಯಿರಿ!
—