ದೋಹಾ, ನವೆಂಬರ್ 22:
ನೇಪಾಳ ವಿರುದ್ಧ ಕೇವಲ 9 ರನ್… ಎಲ್ಲರೂ “ಅಭಿಷೇಕ್ ಫಾರ್ಮ್ ನಲ್ಲಿ ಇಲ್ಲ” ಅಂದ್ರು.
ಆದರೆ ಪಾಕಿಸ್ತಾನ ಅಂದ ತಕ್ಷಣ ಈ ಹುಡುಗನ ರಕ್ತವೇ ಬೇರೆ!
ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯ ಗ್ರೂಪ್ ಪಂದ್ಯದಲ್ಲಿ ಪಾಕಿಸ್ತಾನ ಎ ತಂಡ 314 ರನ್ ಗುರಿ ಕೊಟ್ಟಿತು. ಭಾರತ ಎ ತಂಡ? ಶುರು ಆಗುತ್ತಿದ್ದಂತೆ 26 ರನ್ಗೆ 2 ವಿಕೆಟ್ ಡೌನ್! ಇಡೀ ಡ್ರೆಸ್ಸಿಂಗ್ ರೂಂ ಸೈಲೆಂಟ್!
ಆಗ ಬಂದ್ರು… ಅಭಿಷೇಕ್ ಶರ್ಮಾ!
ಬಂದಿದ್ದೇ ಬಿರುಗಾಳಿಯಂತೆ!
ಒತ್ತಡ ಅಂದ್ರೆ ಏನು ಅಂತ ಗೊತ್ತಿಲ್ಲದ ಹಾಗೆ ಬ್ಯಾಟ್ ಬೀಸಿದ್ರು. ಪಾಕ್ ಬೌಲರ್ಗಳು ಎಸೆದ ಚೆಂಡೆಲ್ಲ ಬೌಂಡರಿ ಲೈನ್ ದಾಟ್ತಿತ್ತು.
ಕೇವಲ 42 ಎಸೆತ, 70 ರನ್!
6 ಬೌಂಡರಿ + 6 ಸಿಕ್ಸರ್!
ಅಂದ್ರೆ 70 ರನ್ನಲ್ಲಿ 60 ರನ್ ಬರೀ ಬೌಂಡರಿ-ಸಿಕ್ಸರ್ನಲ್ಲೇ!
ಆ 8ನೇ ಓವರ್ – ಪಾಕ್ ಗೆ ನರಕ ದರ್ಶನ!
ಇಮ್ರಾನ್ ರಾಂಧಾವ ಬೌಲಿಂಗ್ ಗೆ ಬಂದ್ರು. ಅಭಿಷೇಕ್ ಮೊದಲ ಎಸೆತ ನೋಡಿದ್ರು, ಅಷ್ಟೇ!
ಆಮೇಲೆ ನಡೆದದ್ದು ಹತ್ಯಾಕಾಂಡ!
ಮಿಡ್ ಆಫ್ ನಲ್ಲಿ 4, ಕವರ್ ನಲ್ಲಿ 4, ಪಾಯಿಂಟ್ ಮೇಲೆ ಸಿಕ್ಸ್, ಎಕ್ಸ್ಟ್ರಾ ಕವರ್ ಮೇಲೆ ಇನ್ನೊಂದು ಸಿಕ್ಸ್, ಮತ್ತೆ 4!
ಒಂದೇ ಓವರ್ನಲ್ಲಿ 24 ರನ್!
ಸ್ಟೇಡಿಯಂನಲ್ಲಿ ಇದ್ದ ಪಾಕ್ ಅಭಿಮಾನಿಗಳು ಕೂಡ ಚಪ್ಪಾಳೆ ತಟ್ಟುವ ಪರಿಸ್ಥಿತಿ ಬಂತು. ಬೌಲರ್ ಮುಖ ನೋಡಿದ್ರೆ ಅರ್ಥ ಆಗ್ತಿತ್ತು – “ಯಪ್ಪಾ ಇವನು ಮನುಷ್ಯನಾ?”
ದುರಾದೃಷ್ಟ – ಸೆಂಚುರಿ ಮಿಸ್!
ತಂಡವನ್ನು ಗೆಲುವಿನ ಹಾದಿಗೆ ತರ್ತಾ ಇದ್ದ ಅಭಿಷೇಕ್, ದೊಡ್ಡ ಹೊಡೆತಕ್ಕೆ ಹೋಗಿ ಹಸನ್ ನವಾಜ್ ಬೌಲಿಂಗ್ ನಲ್ಲಿ ಔಟಾದ್ರು. ಆದ್ರೆ ಹೋಗುವಾಗ್ಲೇ ಪಂದ್ಯದ ಮೊಮೆಂಟಮ್ ಸಂಪೂರ್ಣ ಬದಲಾಯಿಸಿ ಹೋದ್ರು.
ಯಾಕೆ ಈ ಇನ್ನಿಂಗ್ಸ್ ಸ್ಪೆಷಲ್?
ಅಭಿಷೇಕ್ ಈಗ ಟಿ20 ಮಾತ್ರ ಆಡ್ತಾರೆ. ODI ನಲ್ಲಿ ತಮ್ಮನ್ನು ತಾವು ಪ್ರೂವ್ ಮಾಡ್ಬೇಕು ಅನ್ನೋ ಒತ್ತಡ ಇತ್ತು. ನೇಪಾಳ ವಿರುದ್ಧ ಫೇಲ್ ಆಗಿದ್ರು.
ಆದ್ರೆ ಪಾಕಿಸ್ತಾನ ಅಂದ್ರೆನೇ ಬೇರೆ ಎನರ್ಜಿ! ಅಲ್ಲಿ ಮತ್ತೆ ತಮ್ಮ ಕ್ಲಾಸ್ ತೋರಿಸಿದ್ದಾರೆ.
ಈಗ ಹೇಳಿ ಗುರು – ಅಭಿಷೇಕ್ ಗೆ ODI ತಂಡದಲ್ಲಿ ಜಾಗ ಸಿಗಬೇಕಾ? ಕಮೆಂಟ್ ನಲ್ಲಿ ಹೇಳಿ!