Headlines

Navratri 2026: ನವರಾತ್ರಿಯ ನಾಲ್ಕನೇ ದಿನ ದೇವಿಗೆ ಯಾವ ನೈವೇದ್ಯವನ್ನು ಅರ್ಪಿಸಬೇಕು?

Navratri 2026: ನವರಾತ್ರಿಯ ನಾಲ್ಕನೇ ದಿನ ದೇವಿಗೆ ಯಾವ ನೈವೇದ್ಯವನ್ನು ಅರ್ಪಿಸಬೇಕು?

 

Navratri 4th Day: ಕೂಷ್ಮಾಂಡ ದೇವಿಗೆ ಮಾಲ್ಪುವಾ ಅಂದ್ರೆ ಪಂಚಪ್ರಾಣ! ಬಯಕೆ ಈಡೇರಲು ಹೀಗೆ ನೈವೇದ್ಯ ಮಾಡಿ

 

ನವರಾತ್ರಿಯ ಪಾವನ ಪರ್ವ ಕಳೆಗಟ್ಟಿದೆ. ಒಂಬತ್ತು ದಿನಗಳ ಕಾಲ ದುರ್ಗೆಯ ಒಂಬತ್ತು ಅವತಾರಗಳನ್ನು ಭಕ್ತಿ ಭಾವದಿಂದ ಪೂಜಿಸಲಾಗುತ್ತದೆ. ನವರಾತ್ರಿಯ ನಾಲ್ಕನೇ ದಿನ ಅತ್ಯಂತ ವಿಶೇಷ, ಈ ದಿನ ವಿಶ್ವವನ್ನು ತನ್ನ ನಗುವಿನಿಂದಲೇ ಸೃಷ್ಟಿಸಿದ ಆದಿಶಕ್ತಿ ಕೂಷ್ಮಾಂಡ ದೇವಿಯನ್ನು ಆರಾಧಿಸಲಾಗುತ್ತದೆ.

 

ಈ ದಿನ ದೇವಿಯನ್ನು ಪೂಜಿಸಿದರೆ ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ, ಜೀವನದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾದ್ರೆ ಈ ದಿನ ದೇವಿಗೆ ಯಾವ ನೈವೇದ್ಯ ಅರ್ಪಿಸಿದರೆ ಒಳ್ಳೆಯದು ಗೊತ್ತಾ?

 

ಕೂಷ್ಮಾಂಡ ದೇವಿಯ ನೆಚ್ಚಿನ ನೈವೇದ್ಯ:

ದೇವಿಗೆ ಕುಂಬಳಕಾಯಿಯಿಂದ ಮಾಡಿದ ಸಿಹಿ ಖಾದ್ಯ ಮತ್ತು *ಮಾಲ್ಪುವಾ / ಮಾಲ್ಪುರಿ* ಎಂದರೆ ಅತ್ಯಂತ ಪ್ರಿಯ. ಈ ದಿನ ಮಾಲ್ಪುವಾ ನೈವೇದ್ಯ ಮಾಡಿ ಅರ್ಪಿಸಿದರೆ ದೇವಿಯ ವಿಶೇಷ ಕೃಪೆಗೆ ಪಾತ್ರರಾಗಬಹುದು.

 

ಮನೆಯಲ್ಲೇ ಸುಲಭವಾಗಿ ಮಾಲ್ಪುರಿ ಮಾಡುವ ವಿಧಾನ:

 

ಬೇಕಾಗುವ ಸಾಮಗ್ರಿಗಳು: 1 ಕಪ್ ಗೋಧಿ ಹಿಟ್ಟು, 1/2 ಕಪ್ ರವೆ, 1 ಕಪ್ ಹಾಲು, 1 ಕಪ್ ಸಕ್ಕರೆ, 3 ಚಮಚ ಖೋವಾ, ಏಲಕ್ಕಿ ಪುಡಿ, ಸೋಂಪು ಪುಡಿ, ತುಪ್ಪ, ಕೇಸರಿ ದಳ, ಬಾದಾಮಿ, ಗೋಡಂಬಿ, ಪಿಸ್ತಾ.

 

ಮಾಡುವ ವಿಧಾನ:

1. ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು, ರವೆ, ಸಕ್ಕರೆ, ಏಲಕ್ಕಿ, ಸೋಂಪು ಪುಡಿ ಮಿಕ್ಸ್ ಮಾಡಿ.

2. ಅದಕ್ಕೆ ಖೋವಾ ಮತ್ತು ಸ್ವಲ್ಪ ಸ್ವಲ್ಪ ಹಾಲು ಹಾಕಿ ಹದವಾಗಿ ಹಿಟ್ಟು ಕಲಸಿ 10 ನಿಮಿಷ ನೆನೆಯಲು ಬಿಡಿ.

3. ಇನ್ನೊಂದು ಪಾತ್ರೆಯಲ್ಲಿ 1 ಕಪ್ ಸಕ್ಕರೆ, 1/2 ಕಪ್ ನೀರು ಹಾಕಿ ಸಕ್ಕರೆ ಪಾಕ ಮಾಡಿ, ಕೇಸರಿ ಸೇರಿಸಿ.

4. ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಹಿಟ್ಟಿನಿಂದ ಸಣ್ಣ ಪೂರಿಯಂತೆ ಹೊಯ್ದು ಎರಡು ಬದಿ ಕೆಂಪಗೆ ಕರಿಯಿರಿ.

5. ಕಾದ ಮಾಲ್ಪುರಿಯನ್ನು ಸಕ್ಕರೆ ಪಾಕದಲ್ಲಿ ಅದ್ದಿ, ಮೇಲೆ ಡ್ರೈ ಫ್ರೂಟ್ಸ್ ಹಾಕಿ ದೇವಿಗೆ ನೈವೇದ್ಯ ಮಾಡಿ.

 

ಈ ಪವಿತ್ರ ನೈವೇದ್ಯದಿಂದ ತಾಯಿ ಕೂಷ್ಮಾಂಡಾಳು ಸಂತುಷ್ಟಳಾಗಿ ನಿಮ್ಮ ಮನೆಗೆ ಸುಖ, ಶಾಂತಿ ನೀಡುತ್ತಾಳೆ.

One thought on “Navratri 2026: ನವರಾತ್ರಿಯ ನಾಲ್ಕನೇ ದಿನ ದೇವಿಗೆ ಯಾವ ನೈವೇದ್ಯವನ್ನು ಅರ್ಪಿಸಬೇಕು?”

Leave a Reply

Your email address will not be published. Required fields are marked *