ಮಂಡ್ಯದಲ್ಲಿ ‘ಅಲ್ಲಾಹು ಅಕ್ಬರ್’ ಘೋಷಣೆ: ಯುವಕನ ವಿರುದ್ಧ ಕೇಸ್!
ಮಂಡ್ಯ, ನ.20: ನಗರದ ಮಹಾವೀರ ವೃತ್ತದಲ್ಲಿ ನಡು ರಸ್ತೆಯಲ್ಲೇ ಹೈಡ್ರಾಮಾ! ಕೆಎಸ್‌ಆರ್‌ಟಿಸಿ ಬಸ್‌ಗೆ ಅಡ್ಡಲಾಗಿ ಬೈಕ್ ನಿಲ್ಲಿಸಿ, ಯುವಕನೊಬ್ಬ ಜೋರಾಗಿ ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗಿದ್ದಾನೆ. ಏಕಾಏಕಿ ನಡೆದ ಈ ಘಟನೆಯಿಂದ ಅಲ್ಲಿದ್ದ ಜನರಲ್ಲಿ ಒಂದು ಕ್ಷಣ ಆತಂಕ, ಗೊಂದಲ! ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಘೋಷಣೆ ಕೂಗಿದ ವ್ಯಕ್ತಿಯನ್ನ ಪತ್ತೆ ಮಾಡಿದ್ದಾರೆ. ಆರೋಪಿ ಯಾರು? ಶಂಕರಮಠ ನಿವಾಸಿ ಅಬ್ಬುಲ್ ಸತ್ತಾರ್ ಎಂದು ಗುರುತು ಪತ್ತೆಯಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಗೊಂದಲ ಸೃಷ್ಟಿಸಿ, ಕಿರಿಕಿರಿ ಮಾಡಿದ ಆರೋಪದ ಮೇಲೆ ಮಂಡ್ಯ ಪೂರ್ವ…