15 ವರ್ಷದ ವೈಭವ್ ಸೂರ್ಯವಂಶಿ ಬಿಹಾರ ತಂಡದ ನಾಯಕ! ಸಚಿನ್ ವಿರೋಧದ ನಡುವೆಯೂ ಐತಿಹಾಸಿಕ ನಿರ್ಧಾರ
15 ವರ್ಷದ ಹುಡುಗನ ಕೈಗೆ ಬಿಹಾರ ತಂಡ! ವೈಭವ್ ಸೂರ್ಯವಂಶಿ ಈಗ ನಾಯಕ ಬಿಹಾರ ಕ್ರಿಕೆಟ್ ಮಂಡಳಿ ಮಹತ್ವದ ಹಾಗೂ ದಿಟ್ಟ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಕೇವಲ 15 ವರ್ಷದ ಯುವ ಬ್ಯಾಟ್ಸ್ಮನ್ ವೈಭವ್ ಸೂರ್ಯವಂಶಿಗೆ ಬಿಹಾರ ತಂಡದ ನಾಯಕತ್ವದ ಜವಾಬ್ದಾರಿಯನ್ನು ನೀಡಲಾಗಿದೆ. ಮುಂಬರುವ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ ವೈಭವ್ ಬಿಹಾರ ತಂಡವನ್ನು ಮುನ್ನಡೆಸಲಿದ್ದಾರೆ. ನವೆಂಬರ್ 14 ರಿಂದ ಡಿಸೆಂಬರ್ 6 ರವರೆಗೆ ನಡೆಯಲಿರುವ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಒಟ್ಟು 38 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ….