Headlines

ಬಿಗ್ ಬಾಸ್ ಮನೆಯಲ್ಲಿ ಗೆಳೆತನದಲ್ಲಿ ಕಿರಿಕ್! ಗಗನ್ Vs ತಾಂಡವ್ ಭೀಕರ ಜಗಳಕ್ಕೆ ಸುದೀಪ್ ಕ್ಲಾಸ್ – ಫೇಕ್ ಫ್ರೆಂಡ್ಶಿಪ್ ಅಂದ್ರು ಕಿಚ್ಚ!

ಬಿಗ್ ಬಾಸ್ ಮನೆಯಲ್ಲಿ ಗೆಳೆತನದಲ್ಲಿ ಕಿರಿಕ್! ಗಗನ್ Vs ತಾಂಡವ್ ಭೀಕರ ಜಗಳಕ್ಕೆ ಸುದೀಪ್ ಕ್ಲಾಸ್ – ಫೇಕ್ ಫ್ರೆಂಡ್ಶಿಪ್ ಅಂದ್ರು ಕಿಚ್ಚ!

ಬೆಂಗಳೂರು: ಪ್ರತಿ ವಾರ ಬಿಗ್ ಬಾಸ್ ಮನೆಯಲ್ಲಿ ನಡೆಯುವ ಟಾಸ್ಕ್ ಗಳ ವೇಳೆ ಜಗಳ ನಡೆಯುವುದು ತೀರಾ ಸಾಮಾನ್ಯ. ಈ ಸೀಸನ್ ನಲ್ಲೂ ಸಹ ಹಲವರ ನಡುವೆ ಪದೇ ಪದೇ ಜಗಳಗಳು ನಡೆಯುತ್ತಲೇ ಇರುತ್ತವೆ. ಆದರೆ ಈ ವಾರ ನಡೆದ ಜಗಳ ಬಹಳ ಗಮನ ಸೆಳೆದಿದೆ. ಈ ವಾರ ತಾಂಡವ್ ಮತ್ತು ಗಗನ್ ನಡುವೆ ಜಗಳ ನಡೆದಿದೆ.

ಅತ್ಯಾಪ್ತ ಸ್ನೇಹಿತರಿಂದ ಎದುರಾಳಿಗಳಾದ್ರು!

ಬಿಗ್ ಬಾಸ್ ಆರಂಭವಾದ ದಿನದಿಂದಲೂ ಗಗನ್ ಮತ್ತು ತಾಂಡವ್ ಅತ್ಯಾಪ್ತ ಸ್ನೇಹಿತರಂತೆ ಇದ್ದರು. ಗಗನ್ ಅಂತೂ ತಾಂಡವ್ ಹೊರಗೆ ಹೋದಾಗ ಬಿಕ್ಕಿ-ಬಿಕ್ಕಿ ಅತ್ತಿದ್ದರು. ಒಬ್ಬರನ್ನು ಬಿಟ್ಟರೆ ಇನ್ನೊಬ್ಬರು ಇಲ್ಲ ಎಂಬಂತೆ ಇದ್ದರು. ಆದರೆ ಈ ವಾರ ಈ ಇಬ್ಬರು ಭೀಕರವಾಗಿ ಜಗಳ ಮಾಡಿದರು.

ಟಾಸ್ಕ್ ನಲ್ಲಿ ಶುರುವಾದ ಕಿರಿಕ್!

ಟಾಸ್ಕ್ ವೇಳೆ ಗಗನ್ ಹಾಗೂ ತಾಂಡವ್ ನಡುವೆ ಕಿರಿಕ್ ಆಯ್ತು. ಗಗನ್, ಒಮ್ಮೆಲೆ ತಾಂಡವ್ ಮೇಲೆ ಹರಿಹಾಯ್ದರು. ತಾಂಡವ್ ಅನ್ನು ‘ಕುನ್ನಿ’ ಎಂದರು.

ತಾಂಡವ್, ಮೊದಲಿಗೆ ‘ಸುಮ್ಮನಿರು, ಸಮಾಧಾನವಾಗಿರು, ಮಾತನಾಡಬೇಡಿ, ರೇಗಿಸಬೇಡ’ ಎಂದೆಲ್ಲ ಗಗನ್ ಅವರನ್ನು ಸಮಾಧಾನದಿಂದ ಇರುವಂತೆ ಹೇಳುತ್ತಲೇ ಇದ್ದರು. ಆದರೆ ಗಗನ್ ಸುಮ್ಮನಾಗಲಿಲ್ಲ. ಕೊನೆಗೆ ತಾಂಡವ್ ಸಹ ತಾಳ್ಮೆ ಕಳೆದುಕೊಂಡು ಹೊಡೆಯುವ-ಬಡಿಯುವ ಮಾತುಗಳನ್ನಾಡಿದರು. ಅಲ್ಲಿಗೆ ಇಬ್ಬರ ನಡುವೆ ದೊಡ್ಡ ಜಗಳವೇ ಆಯ್ತು.

2 ದಿನಕ್ಕೆ ಮತ್ತೆ ಒಂದಾದ್ರು!

ಅದಾದ ಕೆಲವೇ ದಿನಗಳ ಬಳಿಕ ಇಬ್ಬರೂ ಒಂದಾದರು. ಊಟದ ಟೇಬಲ್ ನಲ್ಲಿ ಗಗನ್, ತಾಂಡವ್ ಗೆ ತುತ್ತು ಮಾಡಿ ಊಟ ತಿನ್ನಿಸಿದರು. ಇದನ್ನು ನೋಡಿ ಮನೆಯವರಿಗೂ, ವೀಕ್ಷಕರಿಗೂ ಅಚ್ಚರಿಯಾಯ್ತು.

ಶನಿವಾರ ಸುದೀಪ್ ಕ್ಲಾಸ್!

ಶನಿವಾರದ ಎಪಿಸೋಡಿನಲ್ಲಿ ಸುದೀಪ್ ಅವರು ಈ ಜಗಳದ ವಿಷಯ ಮಾತನಾಡಿದರು. ‘ಮಂಜ ಬಂದು ಹೊರಗಿನ ರಿಪೋರ್ಟ್ ಹೇಳಿದ್ದಕ್ಕೆ ನಿಮ್ಮಿಬ್ಬರ ನಡುವೆ ಜಗಳ ಆಯ್ತು’ ಎಂದರು. ಆದರೆ ಇಬ್ಬರೂ ಇದನ್ನು ಒಪ್ಪದೆ ಬೇರೆ ಬೇರೆ ಕಾರಣಗಳನ್ನು ಹೇಳಿದರು. ಸುದೀಪ್ ಅವರು ಕೆದಕಿ-ಕೆದಕಿ ಕೇಳಿದಾಗ ಬೇರೆ ಕೆಲವು ಆಂತರಿಕ ಕಾರಣಗಳನ್ನು ಸಹ ನೀಡಿದರು.

ಕೊನೆಗೆ ಮಾತನಾಡಿದ ಸುದೀಪ್, ಗಗನ್ ಅವರನ್ನು ಉದ್ದೇಶಿಸಿ, ಒಂದು ಚೆಂಡಿಗೆ ನೀವು ತಾಂಡವ್ ವಿರುದ್ಧ ಅಷ್ಟು ರಾಂಗ್ ಆಗುವ ಅಗತ್ಯ ಇರಲಿಲ್ಲ ಎಂದರು. ತಾಂಡವ್ ಗೆ ಸಹ ‘ಅಷ್ಟು ಹಿಂಸಾತ್ಮಕ ಬೆದರಿಕೆ ಹಾಕುವ ಅಗತ್ಯ ಇರಲಿಲ್ಲ’ ಎಂದರು.

ಫೇಕ್ ಜಗಳ, ಫೇಕ್ ಫ್ರೆಂಡ್ಶಿಪ್!

ಅಷ್ಟೆಲ್ಲ ಆದ ಮೇಲೆ ಅಂತಿಮವಾಗಿ ಒಬ್ಬರಿಗೊಬ್ಬರು ಊಟ ತಿನ್ನಿಸುವ ಅವಶ್ಯಕತೆ ಏನಿತ್ತು. ಅಷ್ಟೆಲ್ಲ ಜಗಳ ಮಾಡಿ ಈಗ ಪರಸ್ಪರ ಊಟ ತಿನ್ನಿಸಿದರೆ ಹೊರಗಡೆ ನೋಡುವವರಿಗೆ ಇದು ಫೇಕ್ ಜಗಳ, ಫೇಕ್ ಫ್ರೆಂಡ್ಶಿಪ್ ಅನಿಸುತ್ತದೆ ಎಂದರು. ನೀವು ಹೊರಗೆ ‘ಜೋಕರ್’ ಗಳ ರೀತಿ ಕಾಣುತ್ತೀರಿ’ ಎಂದರು.

ಸುದೀಪ್ ಅವರ ಈ ಮಾತಿಗೆ ಮನೆ ಸಂಪೂರ್ಣ ಸೈಲೆಂಟ್ ಆಯ್ತು. ಗಗನ್ ಮತ್ತು ತಾಂಡವ್ ಇಬ್ಬರೂ ತಲೆ ತಗ್ಗಿಸಿದರು.

ಮುಂದೇನು?

ಈ ಜಗಳದ ನಂತರ ಗಗನ್ ಮತ್ತು ತಾಂಡವ್ ಸ್ನೇಹ ಮುಂದುವರಿಯುತ್ತಾ? ಇಲ್ಲಾ ಶತ್ರುಗಳಾಗ್ತಾರಾ? ಮುಂದಿನ ಎಪಿಸೋಡ್ ನಲ್ಲಿ ಗೊತ್ತಾಗಲಿದೆ.

ನಿಮ್ಮ ಅಭಿಪ್ರಾಯವೇನು? ಗಗನ್ ತಪ್ಪಾ? ತಾಂಡವ್ ತಪ್ಪಾ? ಕಮೆಂಟ್ ಮಾಡಿ ತಿಳಿಸಿ!

Leave a Reply

Your email address will not be published. Required fields are marked *