ಬೆಂಗಳೂರು, ನವೆಂಬರ್ 26: ಬೆಂಗಳೂರಲ್ಲಿ ಮತ್ತೆ ಮಾದಕ ವಸ್ತು ಮಾರಾಟ ಜಾಲಕ್ಕೆ ಬಿಗ್ ಶಾಕ್! ಯಲಹಂಕ ಉಪನಗರ ಮತ್ತು ಭಾರತೀನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬರೋಬ್ಬರಿ ₹11.74 ಕೋಟಿ ಮೌಲ್ಯದ 5.87 ಕೆಜಿ MDMA ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಮೊದಲ ಕೇಸ್ – ಯಲಹಂಕ:
ಕೆಂಚೇನಹಳ್ಳಿ ಬಳಿ ಡ್ರಗ್ಸ್ ಮಾರಾಟಕ್ಕೆ ಕಾಯ್ತಿದ್ದಾರೆ ಅನ್ನೋ ಖಚಿತ ಮಾಹಿತಿ ಸಿಕ್ಕಿದ್ದೇ, ಯಲಹಂಕ ನ್ಯೂಟೌನ್ ಪೊಲೀಸರು ದಾಳಿ ಮಾಡಿದ್ದಾರೆ. ಅಲ್ಲಿ ಸಿಕ್ಕಿಬಿದ್ದಿದ್ದು ಇಬ್ಬರು.
1. ಗಂಗೊಂಡನಹಳ್ಳಿಯ 28 ವರ್ಷದ ಕಾರು ಮೆಕ್ಯಾನಿಕ್ ಇಮ್ರಾನ್ ಪಾಷಾ
2. ಹೊಸಕೋಟೆಯ 27 ವರ್ಷದ ಆಯೇಷಾ ಸಿದ್ದಿಕಿ
ಇವರಿಂದ ಬರೋಬ್ಬರಿ 5.72 ಕೆಜಿ MDMA ಸಿಕ್ಕಿದೆ!
ವಿಚಾರಣೆ ವೇಳೆ ಶಾಕಿಂಗ್ ವಿಚಾರ ಬಯಲಾಗಿದೆ. ನವದೆಹಲಿಯಿಂದ ಡ್ರಗ್ಸ್ ಪಾರ್ಸೆಲ್ ತಂದುಕೊಟ್ಟರೆ 1 ಲಕ್ಷ ರೂಪಾಯಿ ಕೊಡ್ತೀವಿ ಅಂತ ಯಾರೋ ಹೇಳಿದ್ದರಂತೆ. ಅದಕ್ಕೆ ಇಬ್ಬರೂ ವಿಮಾನದಲ್ಲಿ ದೆಹಲಿಗೆ ಹೋಗಿ, ಅಲ್ಲಿ ಸಪ್ಲೈಯರ್ ಭೇಟಿಯಾಗಿ ಮಾಲ್ ತಗೊಂಡು, ಹರಿಯಾಣ ನಂಬರ್ ಟ್ಯಾಕ್ಸಿಯಲ್ಲಿ ಬೆಂಗಳೂರಿಗೆ ತಂದಿದ್ದಾರೆ!
ಈ ಮಾಲ್ ಯಾರಿಗೆ ತಲುಪಿಸಬೇಕಿತ್ತು? ಹಿಂದೆ ಯಾರಿದ್ದಾರೆ? ಅಂತ ಪೊಲೀಸರು ಈಗ ತನಿಖೆ ಮಾಡ್ತಿದ್ದಾರೆ.
ಎರಡನೇ ಕೇಸ್ – ಭಾರತೀನಗರ:
ಇನ್ನೊಂದು ಕಡೆ ಭಾರತೀನಗರ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಹಿಡಿದು 150.43 ಗ್ರಾಂ MDMA ಜಪ್ತಿ ಮಾಡಿದ್ದಾರೆ.
ಕಡಿಮೆ ಬೆಲೆಗೆ ತಂದು, ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಹೆಚ್ಚಿನ ಬೆಲೆಗೆ ಮಾರಿ ದುಡ್ಡು ಮಾಡ್ತಿದ್ದೆ ಅಂತ ಆರೋಪಿ ಒಪ್ಪಿಕೊಂಡಿದ್ದಾನೆ.
ಒಟ್ಟು ಎರಡೂ ಕೇಸ್ ನಲ್ಲಿ 5 ಕೆಜಿ 870 ಗ್ರಾಂ MDMA ಜಪ್ತಿಯಾಗಿದೆ. ಎನ್ಡಿಪಿಎಸ್ ಕಾಯ್ದೆಯಡಿ ಕೇಸ್ ದಾಖಲಾಗಿದೆ.