Headlines

ಬಾಲಿವುಡ್ ನಟ ಅಜಯ್ ದೇವ್‌ಗನ್‌ಗೆ ಬಿಗ್ ಶಾಕ್! ಜುಹುವಿನ ಐಷಾರಾಮಿ ಬಂಗಲೆಯ ಅಕ್ರಮ ಕಟ್ಟಡ ಧ್ವಂಸ`

ಬಾಲಿವುಡ್ ನಟ ಅಜಯ್ ದೇವ್‌ಗನ್‌ಗೆ ಬಿಗ್ ಶಾಕ್! ಜುಹುವಿನ ಐಷಾರಾಮಿ ಬಂಗಲೆಯ ಅಕ್ರಮ ಕಟ್ಟಡ ಧ್ವಂಸ`

 

ಮುಂಬೈನಲ್ಲಿ ಅಜಯ್ ದೇವ್‌ಗನ್‌ಗೆ ಬಿಎಂಸಿಯಿಂದ ಬಿಗ್ ಶಾಕ್ – ಜುಹು ಬಂಗಲೆಯ ಅಕ್ರಮ ಕಟ್ಟಡ ನೆಲಸಮ!

ಬಾಲಿವುಡ್‌ನ ಸಿಂಗಂ ಅಂತಾನೇ ಖ್ಯಾತರಾಗಿರುವ ನಟ ಅಜಯ್ ದೇವ್‌ಗನ್ ಅವರಿಗೆ ಮುಂಬೈ ಮಹಾನಗರ ಪಾಲಿಕೆ (BMC) ದೊಡ್ಡ ಆಘಾತ ನೀಡಿದೆ.

ಮುಂಬೈನ ಅತ್ಯಂತ ದುಬಾರಿ ಪ್ರದೇಶವಾದ ಜುಹು ನಲ್ಲಿರುವ ಅಜಯ್ ದೇವ್‌ಗನ್ ಅವರ ಐಷಾರಾಮಿ ಬಂಗಲೆಯ ಮೇಲೆ ಬಿಎಂಸಿ ಬುಲ್ಡೋಜರ್ ನುಗ್ಗಿದೆ!

ಏನಾಯ್ತು ಗೊತ್ತಾ?

ಕಪೋಲ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಯಲ್ಲಿರುವ ಅಜಯ್ ದೇವ್‌ಗನ್ ಬಂಗಲೆಯಲ್ಲಿ ಯಾವುದೇ ಅನುಮತಿ ಇಲ್ಲದೆ, ಅನಧಿಕೃತವಾಗಿ ಒಳಾಂಗಣ ಬದಲಾವಣೆಗಳು (Illegal Interior Construction) ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಬಿಎಂಸಿಗೆ ಸಿಕ್ಕಿತ್ತು.

ಈ ಹಿನ್ನೆಲೆಯಲ್ಲಿ ಬಿಎಂಸಿ ಅಧಿಕಾರಿಗಳು ಈ ಹಿಂದೆ “ಕೆಲಸ ನಿಲ್ಲಿಸಿ” (Stop Work Notice) ಎಂದು ನೋಟಿಸ್ ಕೊಟ್ಟಿದ್ದರು. ಆದರೆ ನಟನ ಕಡೆಯಿಂದ ನಾಲ್ಕು ವಾರಗಳ ಕಾಲಾವಕಾಶ ಕೇಳಿದ್ದು ಬಿಟ್ಟರೆ, ಯಾವುದೇ ದಾಖಲೆ ಅಥವಾ ಸರಿಯಾದ ಉತ್ತರ ಬಂದಿರಲಿಲ್ಲ.

ಸುಮ್ಮನಾದರಾ ಬಿಎಂಸಿ ಅಧಿಕಾರಿಗಳು? ನೇರವಾಗಿ ಬಂದು *ಅನಧಿಕೃತ ನಿರ್ಮಾಣವನ್ನು ಧ್ವಂಸ ಮಾಡಿ ಹೋಗಿದ್ದಾರೆ!

ಅಜಯ್ ದೇವ್‌ಗನ್ ರಿಯಾಕ್ಷನ್ ಏನು?

ಈ ದಿಢೀರ್ ದಾಳಿ ಮತ್ತು ಧ್ವಂಸ ಕಾರ್ಯಾಚರಣೆ ಬಗ್ಗೆ ನಟ ಅಜಯ್ ದೇವ್‌ಗನ್ ಇಲ್ಲಿಯವರೆಗೆ ಒಂದು ಮಾತೂ ಆಡಿಲ್ಲ. ಮೌನಕ್ಕೆ ಶರಣಾಗಿದ್ದಾರೆ.

ಈ ಕ್ರಮವು ಸಾಮಾನ್ಯ ಜನರಿಗೆ ಮಾತ್ರವಲ್ಲ, ಬಾಲಿವುಡ್ ಸ್ಟಾರ್‌ಗಳಿಗೂ ಕಾನೂನು ಒಂದೇ ಎಂದು ಬಿಎಂಸಿ ಸಂದೇಶ ರವಾನಿಸಿದೆ.

ಮುಂಬೈನಲ್ಲಿ ಅಕ್ರಮ ಕಟ್ಟಡಗಳ ವಿರುದ್ಧ ಬಿಎಂಸಿ ಬಿಗ್ ಆಪರೇಷನ್ ಶುರು ಮಾಡಿದೆ. ದೊಡ್ಡ ದೊಡ್ಡ ಸೆಲೆಬ್ರಿಟಿಗಳೇ ಈಗ ಬಿಎಂಸಿ ರಾಡಾರ್‌ನಲ್ಲಿದ್ದಾರೆ!

ಇನ್ನು ಅಜಯ್ ದೇವ್‌ಗನ್ ಅವರು ಈ ಬಗ್ಗೆ ಕೋರ್ಟ್ ಮೆಟ್ಟಿಲೇರುತ್ತಾರಾ ಅಥವಾ ದಂಡ ಕಟ್ಟಿ ಸುಮ್ಮನಾಗುತ್ತಾರಾ ಅಂತ 

Leave a Reply

Your email address will not be published. Required fields are marked *