
ಸಾರಿಗೆ ನಿಗಮಗಳಲ್ಲಿ PF ಬಿಕ್ಕಟ್ಟು: 2500 ಕೋಟಿ ಬಾಕಿ, ನೌಕರರ ಆಕ್ರೋಶ
ಬೆಂಗಳೂರು, ಅ.13: ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ (KSRTC, BMTC, NWKRTC, KKRTC) ನೌಕರರ ಭವಿಷ್ಯ ನಿಧಿ (PF) ಬಾಕಿ ಪ್ರಕರಣ ಗಂಭೀರ ಸ್ವರೂಪ ಪಡೆದಿದೆ.
1,10,000 ನೌಕರರ ವೇತನದಿಂದ ಕಡಿತಗೊಂಡ 12% PF ಮೊತ್ತ, ಅಂದಾಜು 2,500 ಕೋಟಿ ರೂ., ಕಳೆದ ಹಲವು ತಿಂಗಳಿಂದ ಸಂಬಂಧಿತ ಟ್ರಸ್ಟ್ಗೆ ಜಮೆಯಾಗಿಲ್ಲ ಎಂದು ತಿಳಿದುಬಂದಿದೆ. ಇದರಿಂದಾಗಿ ಆಗಸ್ಟ್ ತಿಂಗಳಿನಿಂದ PF ಮುಂಗಡ ಕೋರಿಕೆಗಳು ಸ್ಥಗಿತಗೊಂಡಿವೆ.
ನಿಗಮಗಳು ಈ ಹಣವನ್ನು ಡೀಸೆಲ್ ಖರೀದಿ ಮತ್ತು ವೇತನ ಪಾವತಿಗೆ ಬಳಸಿಕೊಂಡಿವೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ವಿವಿಧ ಸಬ್ಸಿಡಿ ಬಾಕಿಗಳ ಅಡಿಯಲ್ಲಿ 593.99 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೂ ನಾಲ್ಕು ನಿಗಮಗಳ ಒಟ್ಟಾರೆ ಹೊಣೆಗಾರಿಕೆ 5,000 ಕೋಟಿ ರೂ. ದಾಟಿದೆ