Headlines

Railway Employees Bonus: ರೈಲ್ವೆ ನೌಕರರಿಗೆ ದೀಪಾವಳಿ ಬಂಪರ್! 11 ಲಕ್ಷ ನೌಕರರಿಗೆ 78 ದಿನದ ಬೋನಸ್ – ಯಾರಿಗೆ ಎಷ್ಟು ಸಿಗುತ್ತೆ?

Railway Employees Bonus: ರೈಲ್ವೆ ನೌಕರರಿಗೆ ದೀಪಾವಳಿ ಬಂಪರ್! 11 ಲಕ್ಷ ನೌಕರರಿಗೆ 78 ದಿನದ ಬೋನಸ್ – ಯಾರಿಗೆ ಎಷ್ಟು ಸಿಗುತ್ತೆ?

 

ನವದೆಹಲಿ, ಅಕ್ಟೋಬರ್ 14: ದೀಪಾವಳಿ ಹಬ್ಬಕ್ಕೂ ಮುನ್ನ ರೈಲ್ವೆ ನೌಕರರಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. 11.4 ಲಕ್ಷಕ್ಕೂ ಹೆಚ್ಚು ರೈಲ್ವೆ ಉದ್ಯೋಗಿಗಳಿಗೆ 2009 ಕೋಟಿ ರೂ. ಮೊತ್ತದ ಉತ್ಪಾದನೆ ಆಧಾರಿತ ಬೋನಸ್ (Production Linked Bonus) ನೀಡಲು ಕೇಂದ್ರ ಸಂಪುಟ ಇಂದು ಅನುಮೋದನೆ ನೀಡಿದೆ.

 

ಇಂದು ಬುಧವಾರ ನಡೆದ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದರ ಅನ್ವಯ ಪ್ರತಿ ನಾನ್-ಗೆಜೆಟೆಡ್ ರೈಲ್ವೆ ನೌಕರನಿಗೆ 78 ದಿನಗಳ ವೇತನಕ್ಕೆ ಸಮನಾದ ಬೋನಸ್ ಸಿಗಲಿದೆ.

 

78 ದಿನದ ಬೋನಸ್ ಎಂದರೆ ಎಷ್ಟು ಹಣ?

 

ಸರ್ಕಾರ ಹಳೆಯ ಲೆಕ್ಕಾಚಾರದ ಪ್ರಕಾರವೇ ಬೋನಸ್ ನೀಡಿದೆ. 7,000 ರೂ. ವೇತನ ಮಿತಿಯನ್ನು ಪರಿಗಣಿಸಿ ಬೋನಸ್ ಲೆಕ್ಕ ಹಾಕಲಾಗಿದೆ.

 

ಅದರಂತೆ, ಪ್ರತಿ ನೌಕರನಿಗೆ ಗರಿಷ್ಠ 17,951 ರೂ. ಬೋನಸ್ ಸಿಗಲಿದೆ.

 

ಆದರೆ ರೈಲ್ವೆ ನೌಕರರ ಸಂಘಗಳು 7,000 ರೂ. ಬದಲು 18,000 ರೂ. ವೇತನ ಮಿತಿ ಪರಿಗಣಿಸಬೇಕು ಎಂದು ಒತ್ತಾಯಿಸುತ್ತಿವೆ. ಒಂದು ವೇಳೆ ಆ ಲೆಕ್ಕದಲ್ಲಿ ನೀಡಿದರೆ ಪ್ರತಿ ನೌಕರನಿಗೆ  46,184 ರೂ. ಬೋನಸ್ ಸಿಗಬೇಕಿತ್ತು. ಆದರೆ ಸದ್ಯಕ್ಕೆ ಸರ್ಕಾರ ಹಳೆಯ ನಿಯಮವನ್ನೇ ಮುಂದುವರಿಸಿದೆ.

 

ಯಾರಿಗೆಲ್ಲ ಈ ಬೋನಸ್ ಸಿಗುತ್ತೆ?

 

ಈ ಬೋನಸ್ ನಾನ್-ಗೆಜೆಟೆಡ್ ವರ್ಗದ ನೌಕರರಿಗೆ ಅನ್ವಯವಾಗುತ್ತದೆ. ಇದರಲ್ಲಿ ಟ್ರ್ಯಾಕ್ ಮೇಂಟೆನರ್ಸ್, ಲೋಕೋ ಪೈಲಟ್‌ಗಳು, ಟ್ರೈನ್ ಮ್ಯಾನೇಜರ್‌ಗಳು, ಸ್ಟೇಷನ್ ಮಾಸ್ಟರ್‌ಗಳು, ಪಾಯಿಂಟ್ಸ್‌ಮನ್ ಮತ್ತು ಗ್ರೂಪ್ C ಸಿಬ್ಬಂದಿ ಸೇರಿದ್ದಾರೆ.

 

ಇನ್ನಷ್ಟು ಮಹತ್ವದ ನಿರ್ಧಾರಗಳು:

 

ದೀಪಾವಳಿ ಬೋನಸ್ ಜೊತೆಗೆ ಕೇಂದ್ರ ಸಂಪುಟ ಇನ್ನೂ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ.

 

1. 53,428 ಕೋಟಿ ಯೋಜನೆ ಮುಂದುವರಿಕೆ: ರಾಷ್ಟ್ರೀಯ ಸಾಮಾಜಿಕ ಸಹಾಯ ಕಾರ್ಯಕ್ರಮವನ್ನು 2030-31ರವರೆಗೆ 5 ವರ್ಷ ಮುಂದುವರಿಸಲು ಅನುಮೋದನೆ ನೀಡಲಾಗಿದೆ.

 

2. ಯೋಜನೆಗಳ ಮರುನಾಮಕರಣ:

– ರಾಷ್ಟ್ರೀಯ ಸಾಮಾಜಿಕ ಸಹಾಯ ಕಾರ್ಯಕ್ರಮ – ಪ್ರಧಾನಮಂತ್ರಿ ಸಾಮಾಜಿಕ ಸಹಾಯ ಯೋಜನೆ

– ಇಂದಿರಾ ಗಾಂಧಿ ವೃದ್ಧಾಪ್ಯ ಪಿಂಚಣಿ – ಪ್ರಧಾನಮಂತ್ರಿ ವೃದ್ಧಾವಸ್ಥಾ ಪಿಂಚಣಿ ಯೋಜನೆ

– ಇಂದಿರಾ ಗಾಂಧಿ ವಿಧವಾ ಪಿಂಚಣಿ – ಪ್ರಧಾನಮಂತ್ರಿ ವಿಧವಾ ಪಿಂಚಣಿ ಯೋಜನೆ

– ಇಂದಿರಾ ಗಾಂಧಿ ದಿವ್ಯಾಂಗ ಪಿಂಚಣಿ – ಪ್ರಧಾನಮಂತ್ರಿ ದಿವ್ಯಾಂಗಜನ ಪಿಂಚಣಿ ಯೋಜನೆ

– ರಾಷ್ಟ್ರೀಯ ಕುಟುಂಬ ನೆರವು ಯೋಜನೆ – ಪ್ರಧಾನಮಂತ್ರಿ ಪರಿವಾರ ಲಾಭ ಯೋಜನೆ

 

3. ದಿವ್ಯಾಂಗ ಪಿಂಚಣಿ ನಿಯಮ ಸಡಿಲ: ದಿವ್ಯಾಂಗ ಪಿಂಚಣಿಗೆ ಅರ್ಹತಾ ಮಾನದಂಡವನ್ನು ಶೇ. 80ರಿಂದ ಶೇ. 40ಕ್ಕೆ ಇಳಿಸಲಾಗಿದೆ. ಅಲ್ಲದೆ ವಯಸ್ಸಿನ ಮಿತಿಯನ್ನು ಹುಟ್ಟಿನಿಂದಲೇ ಎಂದು ನಿಗದಿಪಡಿಸಲಾಗಿದೆ. 79 ವರ್ಷದೊಳಗಿನವರಿಗೆ 375 ರೂ. ಮತ್ತು 80 ವರ್ಷ ಮೇಲ್ಪಟ್ಟವರಿಗೆ 625 ರೂ. ಪಿಂಚಣಿ ನೀಡಲಾಗುತ್ತದೆ.

 

 

Leave a Reply

Your email address will not be published. Required fields are marked *