Headlines

ಇತಿಹಾಸ ಸೃಷ್ಟಿಸಿದ ಭಾರತೀಯ ರೈಲ್ವೆ! ವಾರಾಣಸಿ-ದೆಹಲಿ ವಂದೇ ಭಾರತ್ ಸ್ಲೀಪರ್ ರೈಲು ಫ್ಲ್ಯಾಗ್ ಆಫ್ – ಕೇವಲ 9 ಗಂಟೆಯಲ್ಲಿ 759 KM!

ಇತಿಹಾಸ ಸೃಷ್ಟಿಸಿದ ಭಾರತೀಯ ರೈಲ್ವೆ! ವಾರಾಣಸಿ-ದೆಹಲಿ ವಂದೇ ಭಾರತ್ ಸ್ಲೀಪರ್ ರೈಲು ಫ್ಲ್ಯಾಗ್ ಆಫ್ – ಕೇವಲ 9 ಗಂಟೆಯಲ್ಲಿ 759 KM!

ನವದೆಹಲಿ, ಅಕ್ಟೋಬರ್ 31: ರೈಲು ಪ್ರಯಾಣಿಕರಿಗೆ ಬಂಪರ್ ಗುಡ್ ನ್ಯೂಸ್! ಕೊನೆಗೂ ಕಾಯುತ್ತಿದ್ದ ಕ್ಷಣ ಬಂದೇ ಬಿಟ್ಟು. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಇಂದು ವಾರಾಣಸಿಯಿಂದ *ವಾರಾಣಸಿ – ನವದೆಹಲಿ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್* ಗೆ ಚಾಲನೆ ನೀಡಿದ್ದಾರೆ.

ಇದು ಸಾಮಾನ್ಯ ರೈಲು ಅಲ್ಲ ಗುರು, ಇದು ಮುಂದಿನ ಪೀಳಿಗೆಯ ಸೂಪರ್‌ಫಾಸ್ಟ್ ಲಕ್ಸುರಿ ರೈಲು!

ಪ್ರಧಾನಿ ಮೋದಿ ಹೇಳಿದ್ದೇನು?

ಈ ಐತಿಹಾಸಿಕ ಕ್ಷಣದ ಬಗ್ಗೆ X ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, “ಭಾರತೀಯ ರೈಲ್ವೆಗೆ ಇದೊಂದು ಐತಿಹಾಸಿಕ ಕ್ಷಣ” ಅಂತ ಬಣ್ಣಿಸಿದ್ದಾರೆ.

ಯಾಕೆ ಈ ರೈಲು ಸ್ಪೆಷಲ್?

ದೆಹಲಿ ಮತ್ತು ಪೂರ್ವ UP ನಡುವೆ ರಾತ್ರಿ ಪ್ರಯಾಣ ಮಾಡೋರಿಗೆ ಇದು ವರದಾನ! ಹಗಲು ಸಮಯ ವೇಸ್ಟ್ ಮಾಡದೆ, ರಾತ್ರಿ ಆರಾಮವಾಗಿ ಮಲಗಿಕೊಂಡು ಬೆಳಿಗ್ಗೆ ದೆಹಲಿ ತಲುಪಬಹುದು. ಕೆಲಸದವರು, ಉದ್ಯಮಿಗಳು, ವಿದ್ಯಾರ್ಥಿಗಳಿಗೆ ಇದು ಬೆಸ್ಟ್ ಆಪ್ಷನ್.

ಶಿವಗಂಗಾ ಎಕ್ಸ್‌ಪ್ರೆಸ್‌ಗಿಂತ 55 ನಿಮಿಷ ಫಾಸ್ಟ್!

 

ಈಗ ಓಡ್ತಿರೋ ಶಿವಗಂಗಾ ಎಕ್ಸ್‌ಪ್ರೆಸ್‌ಗೆ ಹೋಲಿಸಿದ್ರೆ:

– ವಾರಾಣಸಿ ಇಂದ ದೆಹಲಿಗೆ – 55 ನಿಮಿಷ ಉಳಿತಾಯ

– ದೆಹಲಿ ಇಂದ ವಾರಾಣಸಿಗೆ – 35 ನಿಮಿಷ ಉಳಿತಾಯ

ಸಮಯ ಮತ್ತು ಮಾರ್ಗ:

– ದೂರ: 759 KM ಕೇವಲ 9 ಗಂಟೆ 20 ನಿಮಿಷದಲ್ಲಿ!

– ವಾರದಲ್ಲಿ 6 ದಿನ: ಶುಕ್ರವಾರ ವಾರಾಣಸಿಯಿಂದ ಇಲ್ಲ, ಶನಿವಾರ ದೆಹಲಿಯಿಂದ ಇಲ್ಲ.

– ಸ್ಟಾಪ್‌ಗಳು: ಪ್ರಯಾಗ್‌ರಾಜ್, ಕಾನ್ಪುರ, ಅಲಿಗಢ್, ಗಾಜಿಯಾಬಾದ್

 

ಒಳಗೆ ಏನೇನಿದೆ ಗೊತ್ತಾ?

ಚೆನ್ನೈ ICF ಮತ್ತು BEML ಸೇರಿ ಮಾಡಿರುವ ಈ ರೈಲಿನಲ್ಲಿ ಒಟ್ಟು 16 AC ಬೋಗಿಗಳು, 823 ಜನ  ಒಟ್ಟಿಗೆ ಪ್ರಯಾಣ ಮಾಡಬಹುದು!

– 1 ಫಸ್ಟ್ AC

– 4 AC 2-Tier

– 11 AC 3-Tier

ಫೀಚರ್ಸ್ ಕೇಳಿದ್ರೆ ಶಾಕ್ ಆಗ್ತೀರಾ:

✅ ಮೆತ್ತನೆಯ ಬೆಡ್, ಪ್ರತಿ ಸೀಟ್‌ನಲ್ಲೂ ಚಾರ್ಜಿಂಗ್ ಪಾಯಿಂಟ್

✅ ಆಟೋಮ್ಯಾಟಿಕ್ ಬಾಗಿಲು, CCTV

✅ ಬಯೋ-ವ್ಯಾಕ್ಯೂಮ್ ಟಾಯ್ಲೆಟ್, ಏರ್ ಪ್ಯೂರಿಫೈಯರ್

✅ ಅಪಘಾತ ತಡೆಯೋ ‘ಕವಚ್’ ಟೆಕ್ನಾಲಜಿ

✅ ಲೋಕೋ ಪೈಲಟ್ ಜೊತೆ ಮಾತಾಡೋಕೆ ಎಮರ್ಜೆನ್ಸಿ ಟಾಕ್-ಬ್ಯಾಕ್

 

ಇದುವರೆಗೆ ಹಗಲು ಪ್ರಯಾಣಕ್ಕೆ ವಂದೇ ಭಾರತ್ ಚೇರ್ ಕಾರ್ ಇತ್ತು, ಈಗ ರಾತ್ರಿ ಪ್ರಯಾಣಕ್ಕೂ ಸೂಪರ್ ಲಕ್ಸುರಿ ಬಂದ್ಬಿಟ್ಟಿದೆ! ಭಾರತೀಯ ರೈಲ್ವೆ ನಿಜಕ್ಕೂ ಬದಲಾಗ್ತಿದೆ!

 

Leave a Reply

Your email address will not be published. Required fields are marked *