Headlines

ಕೇಂದ್ರದಿಂದ ರಾಜ್ಯಗಳಿಗೆ ದೀಪಾವಳಿ ಗಿಫ್ಟ್: 1.09 ಲಕ್ಷ ಕೋಟಿ ತೆರಿಗೆ ಹಂಚಿಕೆ, ಕರ್ನಾಟಕದ ಪಾಲು ಎಷ್ಟು?

ಕೇಂದ್ರದಿಂದ ರಾಜ್ಯಗಳಿಗೆ ದೀಪಾವಳಿ ಗಿಫ್ಟ್: 1.09 ಲಕ್ಷ ಕೋಟಿ ತೆರಿಗೆ ಹಂಚಿಕೆ, ಕರ್ನಾಟಕದ ಪಾಲು ಎಷ್ಟು?

ಬೆಂಗಳೂರು: ಹಬ್ಬದ ಸಂಭ್ರಮದ ನಡುವೆಯೇ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ. ದೇಶದ ಎಲ್ಲಾ ರಾಜ್ಯಗಳಿಗೆ ಒಟ್ಟು *1 ಲಕ್ಷದ 9 ಸಾವಿರ ಕೋಟಿ ರೂಪಾಯಿ* ತೆರಿಗೆ ಪಾಲನ್ನು ಕೇಂದ್ರ ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದೆ.

ಇದು ಪ್ರತಿ ತಿಂಗಳು ನೀಡುವ ಸಾಮಾನ್ಯ ತೆರಿಗೆ ಪಾಲಲ್ಲ. ಅದರ ಜೊತೆಗೆ ನೀಡಲಾಗಿರುವ ಹೆಚ್ಚುವರಿ ಮೊತ್ತ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇದು ಎರಡನೇ ಹೆಚ್ಚುವರಿ ಕಂತು. ಕಳೆದ ಆಗಸ್ಟ್‌ನಲ್ಲೂ ಇದೇ ರೀತಿ 1.09 ಲಕ್ಷ ಕೋಟಿ ಬಿಡುಗಡೆಯಾಗಿತ್ತು.

ಕರ್ನಾಟಕಕ್ಕೆ ಸಿಕ್ಕಿದ್ದು ಎಷ್ಟು?

ಈ ಬಾರಿಯ ಹಂಚಿಕೆಯಲ್ಲಿ ಕರ್ನಾಟಕಕ್ಕೆ 4,504 ಕೋಟಿ ರೂ. ಸಿಕ್ಕಿದೆ. ರಾಜ್ಯದಲ್ಲಿ ಮೂಲಸೌಕರ್ಯ ಯೋಜನೆಗಳು, ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗದಂತೆ ಈ ಹಣ ನೆರವಾಗಲಿದೆ.

ಒಂದು ಕಡೆ ರಾಜ್ಯ GST ಸಂಗ್ರಹದಲ್ಲಿ ದಾಖಲೆ ಬರೆದಿದೆ. ಸೆಪ್ಟೆಂಬರ್‌ನಲ್ಲಿ GST ಸಂಗ್ರಹ 14.7% ಏರಿಕೆಯಾಗಿ 2.03 ಲಕ್ಷ ಕೋಟಿ ದಾಟಿದೆ. ಇದರಲ್ಲಿ ಕರ್ನಾಟಕ ಶೇ.16ರ ಏರಿಕೆ ಕಂಡು 13,884 ಕೋಟಿ ಸಂಗ್ರಹಿಸಿ ದೇಶದಲ್ಲಿ 2ನೇ ಸ್ಥಾನ  ಪಡೆದಿದೆ. ಆದರೂ ಹಂಚಿಕೆಯಲ್ಲಿ ಕರ್ನಾಟಕ 9ನೇ ಸ್ಥಾನಕ್ಕೆ ಕುಸಿದಿದೆ.

 

ಅತಿ ಹೆಚ್ಚು ಹಣ ಪಡೆದ ರಾಜ್ಯಗಳು:

– UP – 19,208 ಕೋಟಿ (No.1)

– Bihar – 10,845 ಕೋಟಿ

– MP – 8,010 ಕೋಟಿ

ಯಾವ್ಯಾವ ರಾಜ್ಯಗಳಿಗೆ ಎಷ್ಟು?

1. ಉತ್ತರ ಪ್ರದೇಶ – 19,208 ಕೋಟಿ ರೂ.
2. ಬಿಹಾರ – 10,845 ಕೋಟಿ ರೂ.
3. ಮಧ್ಯಪ್ರದೇಶ – 8,010 ಕೋಟಿ ರೂ.
4. ಪಶ್ಚಿಮ ಬಂಗಾಳ – 7,866 ಕೋಟಿ ರೂ.
5. ಮಹಾರಾಷ್ಟ್ರ – 7,022 ಕೋಟಿ ರೂ.
6. ರಾಜಸ್ಥಾನ – 6,460 ಕೋಟಿ ರೂ.
7. ಒಡಿಶಾ – 4,819 ಕೋಟಿ ರೂ.
8. ಆಂಧ್ರಪ್ರದೇಶ – 4,597 ಕೋಟಿ ರೂ.
9. ಕರ್ನಾಟಕ – 4,504 ಕೋಟಿ ರೂ.
10. ತಮಿಳುನಾಡು – 4,466 ಕೋಟಿ ರೂ.
11. ಗುಜರಾತ್ – 4,094 ಕೋಟಿ ರೂ.
12. ಜಾರ್ಖಂಡ್ – 3,660 ಕೋಟಿ ರೂ.
13. ಛತ್ತೀಸ್‌ಗಢ – 3,602 ಕೋಟಿ ರೂ.
14. ಅಸ್ಸಾಂ – 3,552 ಕೋಟಿ ರೂ.
15. ಕೇರಳ – 2,597 ಕೋಟಿ ರೂ.
16. ತೆಲಂಗಾಣ – 2,370 ಕೋಟಿ ರೂ.
17. ಪಂಜಾಬ್ – 2,176 ಕೋಟಿ ರೂ.
18. ಹರಿಯಾಣ – 1,484 ಕೋಟಿ ರೂ.
19. ಅರುಣಾಚಲ ಪ್ರದೇಶ – 1,476 ಕೋಟಿ ರೂ.
20. ಉತ್ತರಾಖಂಡ – 1,244 ಕೋಟಿ ರೂ.

ಆರ್ಥಿಕ ಚಟುವಟಿಕೆ ಗಣನೀಯವಾಗಿ ಸದೃಢಗೊಂಡಿರುವುದರಿಂದ ತೆರಿಗೆ ಸಂಗ್ರಹ ನಿರೀಕ್ಷೆಗಿಂತ ಉತ್ತಮವಾಗಿದೆ. ಹೀಗಾಗಿ ರಾಜ್ಯಗಳ ಬೊಕ್ಕಸಕ್ಕೆ ಆರ್ಥಿಕ ಚೈತನ್ಯ ನೀಡಲು ಕೇಂದ್ರ ಮುಂಚಿತವಾಗಿಯೇ ಈ ಹಣ ಬಿಡುಗಡೆ ಮಾಡಿದೆ ಎಂದು ಸಚಿವಾಲಯ ಹೇಳಿದೆ.

Leave a Reply

Your email address will not be published. Required fields are marked *