Headlines

ಬಾಗಲಕೋಟೆ ರೈತರಿಗೆ ಡಬಲ್ ಶಾಕ್: ಬೆಲೆಗಾಗಿ ಹೋರಾಟದ ನಡುವೆಯೇ 135 ಕಡೆ ಕಬ್ಬಿನ ಹೊಲಕ್ಕೆ ಬೆಂಕಿ, 11 ಕೋಟಿ ಬೆಳೆ ಭಸ್ಮ!

ಬಾಗಲಕೋಟೆ ರೈತರಿಗೆ ಡಬಲ್ ಶಾಕ್: ಬೆಲೆಗಾಗಿ ಹೋರಾಟದ ನಡುವೆಯೇ 135 ಕಡೆ ಕಬ್ಬಿನ ಹೊಲಕ್ಕೆ ಬೆಂಕಿ, 11 ಕೋಟಿ ಬೆಳೆ ಭಸ್ಮ!
 

ಬಾಗಲಕೋಟೆ, ನ.3: ಒಂದೆಡೆ ಬರಗಾಲ, ಮತ್ತೊಂದೆಡೆ ಕಬ್ಬಿಗೆ ಬೆಲೆ ಇಲ್ಲದೆ ಕಳೆದ 45 ದಿನದಿಂದ ಹೋರಾಟ ಮಾಡ್ತಿರೋ ಬಾಗಲಕೋಟೆ ರೈತರಿಗೆ ಈಗ ‘ಬೆಂಕಿ’ ಸಂಕಷ್ಟ ಎದುರಾಗಿದೆ. ಜಿಲ್ಲಾದ್ಯಂತ ಕಬ್ಬಿನ ಹೊಲಗಳು ಹೊತ್ತಿ ಉರಿಯುತ್ತಿದ್ದು, ರೈತರು ಕಂಗಾಲಾಗಿದ್ದಾರೆ.

11 ಕೋಟಿ ಬೆಳೆ ಅಗ್ನಿಗೆ ಆಹುತಿ:

ಜಿಲ್ಲಾಡಳಿತದ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಬರೋಬ್ಬರಿ *135 ಕಡೆ* ಕಬ್ಬಿನ ಹೊಲಗಳಿಗೆ ಬೆಂಕಿ ಬಿದ್ದಿದೆ.

– ಒಟ್ಟು ನಷ್ಟ: ₹11 ಕೋಟಿ 62 ಲಕ್ಷ

– ಸಂಪೂರ್ಣ ಭಸ್ಮ: ₹3 ಕೋಟಿ 41 ಲಕ್ಷ ಮೌಲ್ಯದ ಕಬ್ಬು

ದಿನಕ್ಕೊಂದು ಕಡೆ ಬೆಂಕಿ ಬೀಳ್ತಿರೋದ್ರಿಂದ ರೈತರು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸೋದೇ ಫುಲ್ ಟೈಮ್ ಕೆಲಸ ಆಗಿದೆ.

ತಾಲೂಕುವಾರು ಬೆಂಕಿ ಲೆಕ್ಕ:

ಬಾಗಲಕೋಟೆ – 24, ಬಾದಾಮಿ – 24, ಮುಧೋಳ – 22, ಬೀಳಗಿ – 21, ಜಮಖಂಡಿ – 19, ರಬಕವಿ-ಬನಹಟ್ಟಿ – 13, ಹುನಗುಂದ-ಇಳಕಲ್ – 6, ಅಮೀನಗಢ – 6

ಇದೊಂದು ಸೈತಾನಿ ಸಂಚು?

ಬೆಂಕಿಗೆ ಶಾರ್ಟ್ ಸರ್ಕ್ಯೂಟ್ ಕಾರಣ ಅಂತ ಹೇಳಲಾಗ್ತಿದ್ರೂ, ಇದು *ಕಿಡಿಗೇಡಿಗಳ ಕೃತ್ಯ* ಅನ್ನೋ ಗಂಭೀರ ಆರೋಪ ಕೇಳಿಬಂದಿದೆ.

ಬೀಳಗಿ ತಾಲೂಕಿನ ಮನ್ನಿಕೇರಿ, ತುಮ್ಮರಮಟ್ಟಿ ಗ್ರಾಮದಲ್ಲಿ ನಿನ್ನೆ ರಾತ್ರಿ ಮಂಕಿ ಕ್ಯಾಪ್ ಹಾಕಿಕೊಂಡು ಬಂದ ಕಿಡಿಗೇಡಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದಾರೆ ಅಂತ ರೈತ ಸಂಘದ ಮುಖಂಡ ಶಿವನಗೌಡ ಪಾಟೀಲ್ ಹಾಗೂ ರೈತ ಬಸವರಾಜ ಛಬ್ಬಿ ಆರೋಪಿಸಿದ್ದಾರೆ. “ಹೋರಾಟ ಹತ್ತಿಕ್ಕಲು ನಡೆದಿರುವ ಷಡ್ಯಂತ್ರ ಇದು” ಅಂತ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರಿಗೆ ಎರಡು ಕಡೆ ಏಟು:

ಸುಟ್ಟ ಕಬ್ಬಿನ ತೂಕ ಕಡಿಮೆ ಆಗುತ್ತೆ, ಜೊತೆಗೆ ಸಕ್ಕರೆ ಕಾರ್ಖಾನೆಗಳು ಸುಟ್ಟ ಕಬ್ಬಿಗೆ ಅತಿ ಕಡಿಮೆ ಬೆಲೆ ಕೊಡ್ತವೆ. ಬೆಲೆ ಹೋರಾಟದ ನಡುವೆಯೇ ಇದು ರೈತರಿಗೆ ಮತ್ತೊಂದು ದೊಡ್ಡ ಹೊಡೆತ.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಸಂಗಪ್ಪ, “ತಾಲೂಕುವಾರು ಮಾಹಿತಿ ಸಂಗ್ರಹಿಸಲಾಗಿದೆ, ಕಾರಣ ಪತ್ತೆ ಹಚ್ಚಿ ಕ್ರಮ ಕೈಗೊಳ್ಳುತ್ತೇವೆ” ಎಂದಿದ್ದಾರೆ.

ರೈತರು ಮಾತ್ರ ಕೂಡಲೇ ಕಿಡಿಗೇಡಿಗಳ ಬಂಧನ ಹಾಗೂ ಬೆಳೆ ನಷ್ಟಕ್ಕೆ ಪರಿಹಾರಕ್ಕೆ ಆಗ್ರಹಿಸಿದ್ದಾರೆ.

 

Leave a Reply

Your email address will not be published. Required fields are marked *