Headlines

ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ: ‘ಮುರಸು’ ಅಬ್ಬರಕ್ಕೆ ಆಂಧ್ರ ಹೈ ಅಲರ್ಟ್, ಒಡಿಶಾಗೂ ಆತಂಕ!

ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ: ‘ಮುರಸು’ ಅಬ್ಬರಕ್ಕೆ ಆಂಧ್ರ ಹೈ ಅಲರ್ಟ್, ಒಡಿಶಾಗೂ ಆತಂಕ!

ಬೆಂಗಳೂರು: ಅರ್ನಾಬ್ ಚಂಡಮಾರುತದ ಅವಾಂತರದಿಂದ ಚೇತರಿಸಿಕೊಳ್ಳುವ ಮುನ್ನವೇ ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ಅಪಾಯಕಾರಿ ಚಂಡಮಾರುತ ರೂಪುಗೊಂಡಿದೆ. ಈ ಬಾರಿಯ ಚಂಡಮಾರುತಕ್ಕೆ ‘ಮುರಸು’ ಎಂದು ಹೆಸರಿಡಲಾಗಿದೆ. ‘ಮುರಸು’ ಅಂದರೆ ಯುದ್ಧದ ನಗಾರಿ ಎಂದು ಅರ್ಥ. ಭಾರತವೇ ಈ ಹೆಸರು ನೀಡಿದೆ.

IMD Latest Update:

ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ನವೆಂಬರ್ 1 ರಂದು ಆಳವಾದ ವಾಯುಭಾರ ಕುಸಿತವು ‘ಮುರಸು’ ಚಂಡಮಾರುತವಾಗಿ ತೀವ್ರಗೊಂಡಿದೆ.-

● Landfall Date: ನವೆಂಬರ್ 3 ರ ಬೆಳಗ್ಗೆ

● ಸ್ಥಳ: ಆಂಧ್ರಪ್ರದೇಶದ ನೆಲ್ಲೂರು ಮತ್ತು ನರಸಾಪುರಂ ನಡುವೆ

● ಗಾಳಿಯ ವೇಗ: 100-110 kmph, ಕೆಲವೆಡೆ 120 kmph ವರೆಗೆ ಬೀಸುವ ಸಾಧ್ಯತ.

ಈ ಚಂಡಮಾರುತ ನವೆಂಬರ್ 2 ರ ಬೆಳಗ್ಗೆ ತೀವ್ರ ಚಂಡಮಾರುತವಾಗಿ ಮಾರ್ಪಾಡಾಗಲಿದ್ದು, ಸೋಮವಾರ ರಾತ್ರಿ. 11:30 ರಿಂದ ಮಂಗಳವಾರ ಬೆಳಗ್ಗೆ 4 ಗಂಟೆಯೊಳಗೆ ಕರಾವಳಿ ದಾಟಲಿದೆ.

ಯಾವ ರಾಜ್ಯಗಳಿಗೆ ಎಫೆಕ್ಟ್?

1. ಆಂಧ್ರಪ್ರದೇಶ – Red Alert:ನೆಲ್ಲೂರು, ಪ್ರಕಾಶಂ, ಗುಂಟೂರು, ಬಾಪಟ್ಲ, ಕೃಷ್ಣಾ – 5 ಜಿಲ್ಲೆಗಳಲ್ಲಿ ರೆಡ್ ಅಲರ್ಟ್. 20 ಮಂಡಲಗಳಲ್ಲಿ ಅತಿ ಭಾರಿ ಮಳೆ. ಸಿಎಂ ಚಂದ್ರಬಾಬು ನಾಯ್ಡು ದೆಹಲಿ ಪ್ರವಾಸ ರದ್ದು.

2. ಒಡಿಶಾ – High Alert:ದಕ್ಷಿಣ ಒಡಿಶಾ – ಗಂಜಾಂ, ಗಜಪತಿ, ರಾಯಗಡ, ಕೊರಾಪುಟ್, ಮಲ್ಕಾನ್‌ಗಿರಿ ಜಿಲ್ಲೆಗಳಲ್ಲಿ ನವೆಂಬರ್ 2 ರಿಂದ 4 ರವರೆಗೆ ಭಾರಿ ಮಳೆ. ಗಜಪತಿ ಜಿಲ್ಲೆಯಲ್ಲಿ 150 ಭೂಕುಸಿತ ಪೀಡಿತ ಪ್ರದೇಶ ಗುರುತಿಸಿ ಜನರ ಸ್ಥಳಾಂತರ ಶುರು. ಕಳೆದ ವಾರ ಅರ್ನಾಬ್‌ನಿಂದ 150 kmph ಗಾಳಿಗೆ ತತ್ತರಿಸಿದ್ದ ಒಡಿಶಾ ಈಗ ಮತ್ತೆ ಆತಂಕದಲ್ಲಿ.

3. ತಮಿಳುನಾಡು:ಚೆನ್ನೈ, ತಿರುವಳ್ಳೂರು, ಕಾಂಚೀಪುರಂ ಸೇರಿದಂತೆ ಉತ್ತರ ಜಿಲ್ಲೆಗಳಲ್ಲಿ ಭಾರಿ ಮಳೆ. ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ.

ಸದ್ಯ ಚಂಡಮಾರುತ ಚೆನ್ನೈನಿಂದ 480 ಕಿಮೀ ಆಗ್ನೇಯದಲ್ಲಿ ಕೇಂದ್ರೀಕೃತವಾಗಿದೆ ಎಂದು IMD ತಿಳಿಸಿದೆ.

Leave a Reply

Your email address will not be published. Required fields are marked *