Headlines

ಬೆಂಗಳೂರು-ಅರಸೀಕೆರೆ ರೈಲು ಪ್ರಯಾಣಿಕರೇ ಎಚ್ಚರ! ನಾಳೆ, ನಾಡಿದ್ದು 12+ ರೈಲು ಕ್ಯಾನ್ಸಲ್ & ಡೈವರ್ಟ್ – ಲಿಸ್ಟ್ ನೋಡಿ!

ಬೆಂಗಳೂರು-ಅರಸೀಕೆರೆ ರೈಲು ಪ್ರಯಾಣಿಕರೇ ಎಚ್ಚರ! ನಾಳೆ, ನಾಡಿದ್ದು 12+ ರೈಲು ಕ್ಯಾನ್ಸಲ್ & ಡೈವರ್ಟ್ – ಲಿಸ್ಟ್ ನೋಡಿ!

ಬೆಂಗಳೂರು, ಅಕ್ಟೋಬರ್ 27: ನೀವು ಅರಸೀಕೆರೆ, ತುಮಕೂರು, ತಿಪಟೂರು ಮಾರ್ಗದಲ್ಲಿ ರೈಲು ಪ್ರಯಾಣ ಮಾಡುತ್ತೀರಾ? ಹಾಗಿದ್ರೆ ಈ ಸುದ್ದಿ ನಿಮಗಾಗಿ!

 

ತುಮಕೂರು ಜಿಲ್ಲೆಯ ತಿಪಟೂರು ಮತ್ತು ಹೊನ್ನವಳ್ಳಿ ರಸ್ತೆ ರೈಲು ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ ನಂ. 88 ರಲ್ಲಿ ಕಾಂಪೋಸಿಟ್ ಗರ್ಡರ್ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಇದಕ್ಕಾಗಿ ಇಂದು (Oct 27) ಮತ್ತು ನಾಳೆ (Oct 28) ರೈಲು ಮಾರ್ಗ ಮತ್ತು ವಿದ್ಯುತ್ ಪೂರೈಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.

ಹಾಗಾಗಿ ಹಲವು ರೈಲುಗಳನ್ನು ರದ್ದು, ಮಾರ್ಗ ಬದಲಾವಣೆ ಮಾಡಲಾಗಿದೆ.

ಅಕ್ಟೋಬರ್ 27ರಂದು CANCEL ಆದ ರೈಲುಗಳು:

– 56224: ಅರಸೀಕೆರೆ – KSR ಬೆಂಗಳೂರು ಪ್ಯಾಸೆಂಜರ್

– 56229: KSR ಬೆಂಗಳೂರು – ಚನ್ನಪಟ್ಟಣ ಪ್ಯಾಸೆಂಜರ್

– 56230: ಚನ್ನಪಟ್ಟಣ – KSR ಬೆಂಗಳೂರು ಪ್ಯಾಸೆಂಜರ್

– 56223: KSR ಬೆಂಗಳೂರು – ಅರಸೀಕೆರೆ ಪ್ಯಾಸೆಂಜರ್

 

ಅಕ್ಟೋಬರ್ 28ರಂದು CANCEL ಆದ ರೈಲುಗಳು:

– 66505: ಯಲಹಂಕ – ಅರಸೀಕೆರೆ MEMU

– 66506: ಅರಸೀಕೆರೆ – ಯಲಹಂಕ MEMU

 

ಮಾರ್ಗ ಬದಲಾವಣೆಯಾಗುವ ರೈಲುಗಳು (Diverted Trains):

Oct 27 ರಂದು:

– 12090 ಶಿವಮೊಗ್ಗ-ಬೆಂಗಳೂರು ಜನಶತಾಬ್ದಿ: ಅರಸೀಕೆರೆ-ಹಾಸನ-ನೆಲಮಂಗಲ ಮಾರ್ಗವಾಗಿ ಹೋಗುತ್ತೆ, ತಿಪಟೂರು-ತುಮಕೂರು ನಿಲುಗಡೆ ಇಲ್ಲ.

– 56519 ಬೆಂಗಳೂರು-ಹೊಸಪೇಟೆ: ದೊಡ್ಡಬೆಲೆ, ತುಮಕೂರು, ಗುಬ್ಬಿ, ತಿಪಟೂರು ಸ್ಟಾಪ್ ಇರಲ್ಲ.

– 11006 ಪುದುಚೇರಿ-ದಾದರ್: ತುಮಕೂರು-ತಿಪಟೂರು ಸ್ಟಾಪ್ ಕ್ಯಾನ್ಸಲ್.

Oct 28 ರಂದು:

– 12079 ಬೆಂಗಳೂರು-ಹುಬ್ಬಳ್ಳಿ ಜನಶತಾಬ್ದಿ: ನೆಲಮಂಗಲ-ಹಾಸನ-ಅರಸೀಕೆರೆ ಮಾರ್ಗ.

ತಡವಾಗಿ ಹೊರಡುವ ರೈಲುಗಳು (Rescheduled):

– 17310 ವಾಸ್ಕೋ-ಯಶವಂತಪುರ: 120 ನಿಮಿಷ (2 ಗಂಟೆ) ತಡ

– 20652 ತಾಳಗುಪ್ಪ-ಬೆಂಗಳೂರು: 140 ನಿಮಿಷ ತಡ

– 16239 ಚಿಕ್ಕಮಗಳೂರು-ಯಶವಂತಪುರ: 60 ನಿಮಿಷ ತಡ

 

ಪ್ರಯಾಣಿಕರು ದಯವಿಟ್ಟು NTES App ನಲ್ಲಿ ರೈಲಿನ ಲೈವ್ ಸ್ಟೇಟಸ್ ಚೆಕ್ ಮಾಡಿಕೊಂಡು ಮನೆಯಿಂದ ಹೊರಡಿ ಎಂದು ನೈಋತ್ಯ ರೈಲ್ವೆ ಮನವಿ ಮಾಡಿದೆ.

Leave a Reply

Your email address will not be published. Required fields are marked *