Headlines

ರಾಮಾಯಣ ಕರ್ನಾಟಕದಲ್ಲಿ ಯಶ್ ಕೈವಶ! ರಾವಣನಾಗಿ ಅಬ್ಬರಿಸೋದಷ್ಟೇ ಅಲ್ಲ, ಇಡೀ ರಾಜ್ಯದ ವಿತರಣೆ ಹೊಣೆ ಹೊತ್ತ ರಾಕಿಂಗ್ ಸ್ಟಾರ್!

ರಾಮಾಯಣ ಕರ್ನಾಟಕದಲ್ಲಿ ಯಶ್ ಕೈವಶ! ರಾವಣನಾಗಿ ಅಬ್ಬರಿಸೋದಷ್ಟೇ ಅಲ್ಲ, ಇಡೀ ರಾಜ್ಯದ ವಿತರಣೆ ಹೊಣೆ ಹೊತ್ತ ರಾಕಿಂಗ್ ಸ್ಟಾರ್!

ಬೆಂಗಳೂರು: ಸದ್ಯ ಭಾರತೀಯ ಚಿತ್ರರಂಗದಲ್ಲಿ ಎಲ್ಲೆಡೆ ಒಂದೇ ಸದ್ದು – ಅದು ‘ರಾಮಾಯಣ’ (Ramayana) ಸಿನಿಮಾದ್ದು! ದಿನ ಕಳೆದಂತೆ ಈ ಸಿನಿಮಾದ ಹವಾ ಜೋರಾಗ್ತಿದೆ. ಭಾರತದಲ್ಲೇ ಅತಿದೊಡ್ಡ ಬಜೆಟ್‌ನಲ್ಲಿ ಮೂಡಿಬರುತ್ತಿರುವ ಈ ಪ್ಯಾನ್ ಇಂಡಿಯಾ ಸಿನಿಮಾಗೆ ಈಗ ಕರ್ನಾಟಕ ಕನೆಕ್ಷನ್ ಸಿಕ್ಕಿದೆ.

ಸ್ಯಾಂಡಲ್‌ವುಡ್‌ನಿಂದ ಜಾಗತಿಕ ಮಟ್ಟಕ್ಕೆ ಬೆಳೆದಿರುವ ರಾಕಿಂಗ್ ಸ್ಟಾರ್ ಯಶ್ (Rocking Star Yash) ಫ್ಯಾನ್ಸ್‌ಗೆ ಬಿಗ್ ಗುಡ್ ನ್ಯೂಸ್!

ರಾವಣನಾಗಿ ಯಶ್ ರುದ್ರಾವತಾರ!

ಈ ಬಿಗ್ ಬಜೆಟ್ ಸಿನಿಮಾದಲ್ಲಿ ಯಶ್ ಕೇವಲ ನಟ ಅಲ್ಲ, ರಾವಣನ (Raavan) ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುವ ಲುಕ್ ಮತ್ತು ಮಾಸ್ ಅವತಾರ ನೋಡಲು ಇಡೀ ದೇಶ ಕಾಯ್ತಿದೆ. ಟ್ರೇಲರ್ ನಲ್ಲಿ ಅವರ ಖದರ್ ನೋಡಿದವರು “ಬಾಕ್ಸ್ ಆಫೀಸ್ ಸುನಾಮಿ ಪಕ್ಕಾ” ಅಂತಿದ್ದಾರೆ.

ನಟ ಮಾತ್ರವಲ್ಲ, ವಿತರಕರೂ ಹೌದು!

ವಿಶೇಷ ಏನಂದ್ರೆ, ಯಶ್ ಅವರು ತಮ್ಮ ಸ್ವಂತ ಸಂಸ್ಥೆ ‘ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್’ (Monster Mind Creations) ಮೂಲಕ ಈ ಸಿನಿಮಾದ ನಿರ್ಮಾಪಕರೂ ಹೌದು. ಈಗ ಅದೇ ಸಂಸ್ಥೆ ಕರ್ನಾಟಕದ ವಿತರಣೆಯ (Karnataka Distribution Rights) ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡಿದೆ ಎಂದು ವರದಿಯಾಗಿದೆ!

ಹೌದು ಗುರು, ರಾಜ್ಯಾದ್ಯಂತ ‘ರಾಮಾಯಣ’ ಸಿನಿಮಾವನ್ನು ಅತ್ಯಂತ ಅದ್ಧೂರಿಯಾಗಿ ಥಿಯೇಟರ್‌ಗೆ ತರಲು ಯಶ್ ಟೀಮ್ ಪ್ಲಾನ್ ಮಾಡಿದೆ. ಇದು ವಿತರಣಾ ಕ್ಷೇತ್ರಕ್ಕೆ ಯಶ್ ಅವರ ಅಧಿಕೃತ ಎಂಟ್ರಿ!

ರಿಲೀಸ್ ಯಾವಾಗ?

ಅದ್ಭುತ 3D ತಂತ್ರಜ್ಞಾನದಲ್ಲಿ ಮೂಡಿಬಂದಿರುವ ಈ ಸಿನಿಮಾ ನವೆಂಬರ್ 5ಕ್ಕೆ ವಿಶ್ವದಾದ್ಯಂತ ರಿಲೀಸ್ ಆಗಲಿದೆ. ಎರಡನೇ ಭಾಗ 2027-28ರ ದೀಪಾವಳಿಗೆ ಬರಲಿದೆ.

ಪಾತ್ರವರ್ಗ: ನಿತೇಶ್ ತಿವಾರಿ ನಿರ್ದೇಶನ, ನಮಿತ್ ಮಲ್ಹೋತ್ರ ಮತ್ತು ಯಶ್ ನಿರ್ಮಾಣ. ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ!

 

 

Leave a Reply

Your email address will not be published. Required fields are marked *