Headlines

ಶಾಕ್ ಮೇಲೆ ಶಾಕ್! ಹಾಂಗ್ ಕಾಂಗ್ ಸಿಕ್ಸಸ್‌ನಲ್ಲಿ ಟೀಂ ಇಂಡಿಯಾಗೆ ಮತ್ತೆ ಮುಖಭಂಗ – ಪಾಕ್ ಬಳಿಕ ಈಗ ಯುಎಇ ಎದುರು ಹೀನಾಯ ಸೋಲು!

ಶಾಕ್ ಮೇಲೆ ಶಾಕ್! ಹಾಂಗ್ ಕಾಂಗ್ ಸಿಕ್ಸಸ್‌ನಲ್ಲಿ ಟೀಂ ಇಂಡಿಯಾಗೆ ಮತ್ತೆ ಮುಖಭಂಗ – ಪಾಕ್ ಬಳಿಕ ಈಗ ಯುಎಇ ಎದುರು ಹೀನಾಯ ಸೋಲು!

 

ಶಾಕ್ ಮೇಲೆ ಶಾಕ್! ಹಾಂಗ್ ಕಾಂಗ್ ಸಿಕ್ಸಸ್‌ನಲ್ಲಿ ಟೀಂ ಇಂಡಿಯಾಗೆ ಮತ್ತೆ ಮುಖಭಂಗ – ಪಾಕ್ ಬಳಿಕ ಈಗ ಯುಎಇ ಎದುರು ಹೀನಾಯ ಸೋಲು!

ಹಾಂಗ್ ಕಾಂಗ್: ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಟೀಂ ಇಂಡಿಯಾ ಕಥೆ ಮುಗೀತು! ಮೊನ್ನೆ ಪಾಕಿಸ್ತಾನ್ ಎದುರು ನಾಚಿಕೆಗೇಡಿನ ಸೋಲು ಕಂಡಿದ್ದ ಭಾರತ, ಈಗ ಅಸೋಸಿಯೇಟ್ ತಂಡ ಯುಎಇ ಎದುರು ಕೂಡ ಅಡ್ಡಾದಿಡ್ಡಿ ಬಿದ್ದಿದೆ. ಕ್ರಿಕೆಟ್ ಅಭಿಮಾನಿಗಳು ಫುಲ್ ಗರಂ ಆಗಿದ್ದಾರೆ.

ನಿತೀಶ್, ತೆವಾಟಿಯಾ, ಶಶಾಂಕ್ ಫ್ಲಾಪ್ ಶೋ!

ಮಿಷನ್ ರೋಡ್ ಗ್ರೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಯುಎಇ ಕ್ಯಾಪ್ಟನ್ ಖಾಲಿದ್ ಶಾ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆದ್ರೆ ಭಾರತದ ಬ್ಯಾಟಿಂಗ್ ನೋಡಿದ್ರೆ ಕಣ್ಣೀರು ಬರುತ್ತೆ!

– ನಿತೀಶ್ ರಾಣಾ – 6 ರನ್

– ರಾಹುಲ್ ತೆವಾಟಿಯಾ – 1 ರನ್

– ಶಶಾಂಕ್ ಸಿಂಗ್ – 1 ರನ್

ಮೂವರೂ ಬಂದ ಹಾಗೆ ವಾಪಸ್! ಫ್ಯಾನ್ಸ್ ಎಲ್ಲಾ “ಏನ್ರೀ ಇದು ಆಟ” ಅಂತ ಬೈತಿದ್ದಾರೆ.

ಬೌಲರ್ ನಟರಾಜನ್ ಬ್ಯಾಟಿಂಗ್‌ನಲ್ಲಿ ಹೀರೋ!

ಒಂದ್ಕಡೆ ಎಲ್ಲಾ ಸ್ಟಾರ್ ಬ್ಯಾಟ್ಸ್‌ಮನ್‌ಗಳು ಫೇಲ್ ಆದ್ರೆ, ಬೌಲರ್ ಟಿ. ನಟರಾಜನ್ ಸೂಪರ್ ಹೀರೋ ಆದ್ರು!

ಕೊನೆಗೆ ಬಂದ ನಟು 14 ಎಸೆತದಲ್ಲಿ 4 ಸಿಕ್ಸರ್, 3 ಫೋರ್ ಸಿಡಿದು *38 ರನ್* ಚಚ್ಚಿದರು. ಟೀಂ ಇಂಡಿಯಾ ಪರ ಹೈಯೆಸ್ಟ್ ಸ್ಕೋರ್ ಬೌಲರ್‌ನದ್ದು ಅಂದ್ರೆ ಪರಿಸ್ಥಿತಿ ಅರ್ಥ ಮಾಡ್ಕೊಳಿ!

ಬ್ಯಾಟ್ಸ್‌ಮನ್ ರಾಹುಲ್ ತ್ರಿಪಾಠಿ (7 ಎಸೆತದಲ್ಲಿ 24 ರನ್) ಮತ್ತು ಕ್ಯಾಪ್ಟನ್ ಕೃನಾಲ್ ಪಾಂಡ್ಯ (15 ರನ್) ಸ್ವಲ್ಪ ಹೋರಾಟ ತೋರಿದ್ರೂ ಟೀಮ್ ಇಂಡಿಯಾ 6 ಓವರ್‌ನಲ್ಲಿ 94 ರನ್‌ಗೆ ಆಲೌಟ್ ಆಯ್ತು.

ಯುಎಇ ಬ್ಯಾಟಿಂಗ್ – ಸಿಕ್ಸರ್‌ಗಳ ಸುರಿಮಳೆ!

95 ರನ್ ಚೇಸ್ ಮಾಡಲು ಬಂದ ಯುಎಇ ಓಪನರ್‌ಗಳು ಭಾರತೀಯ ಬೌಲರ್‌ಗಳನ್ನು ಚಿಂದಿ-ಚಿಂದಿ ಮಾಡಿದ್ರು!

ಖಾಲಿದ್ ಶಾ – 14 ಎಸೆತದಲ್ಲಿ 6 ಸಿಕ್ಸರ್, 3 ಫೋರ್, 52_ ರನ್ ನಾಟೌಟ್

ಅನ್ಶ್ ಟಂಡನ್ – 12 ಎಸೆತದಲ್ಲಿ 5 ಸಿಕ್ಸರ್, 39_ ರನ್ ನಾಟೌಟ್

ಯುಎಇ ಕೇವಲ 4.2 ಓವರ್‌ನಲ್ಲಿ ವಿಕೆಟ್ ನಷ್ಟವಿಲ್ಲದೇ 97 ರನ್ ಬಾರಿಸಿ 6 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿತು. 2.3 ಓವರ್‌ನಲ್ಲೇ 50 ರನ್ ದಾಟಿಸಿಬಿಟ್ರು!

ಪಾಕ್ ಆಯ್ತು, ಈಗ ಯುಎಇ – ನಾಚಿಕೆಗೇಡು!

ಹಾಂಗ್ ಕಾಂಗ್ ಸಿಕ್ಸಸ್‌ನಲ್ಲಿ ಸತತ ಎರಡು ಸೋಲು ಕಂಡ ಭಾರತ ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ. ಪಾಕ್ ಎದುರು ಸೋತಿದ್ದು ಒಂದು ಕಡೆ, ಈಗ ಯುಎಇ ನಂತಹ ತಂಡದ ಎದುರು ಈ ರೀತಿ ಸೋಲೋದು ಟೀಂ ಇಂಡಿಯಾ ಕ್ರಿಕೆಟ್ ಇತಿಹಾಸಕ್ಕೆ ಕಪ್ಪು ಚುಕ್ಕೆ ಅಂತ ಫ್ಯಾನ್ಸ್ ಕಮೆಂಟ್ ಮಾಡ್ತಿದ್ದಾರೆ.

ಪಂದ್ಯದ ಸ್ಕೋರ್:

ಭಾರತ – 94/ಆಲೌಟ್ (6 ಓವರ್) – ನಟರಾಜನ್ 38

ಯುಎಇ – 97/0 (4.2 ಓವರ್) – ಖಾಲಿದ್ ಶಾ 52

 

Leave a Reply

Your email address will not be published. Required fields are marked *