Headlines

ಬೆಂಗಳೂರಿನಲ್ಲಿ 11 ಸಾವಿರ ಜನರಿಗೆ LPG ಸಿಲಿಂಡರ್ ಇಲ್ಲ! 36 ಸಾವಿರ ಅರ್ಜಿ ಬಾಕಿ – ಸಚಿವ ರಿಜ್ವಾನ್ ಪತ್ರ

ಬೆಂಗಳೂರಿನಲ್ಲಿ 11 ಸಾವಿರ ಜನರಿಗೆ LPG ಸಿಲಿಂಡರ್ ಇಲ್ಲ! 36 ಸಾವಿರ ಅರ್ಜಿ ಬಾಕಿ – ಸಚಿವ ರಿಜ್ವಾನ್ ಪತ್ರ

ಬೆಂಗಳೂರು, ಅಕ್ಟೋಬರ್ 20: ಕರ್ನಾಟಕದಲ್ಲಿ LPG ಸಿಲಿಂಡರ್ ಸಮಸ್ಯೆ ಇನ್ನೂ ಬಗೆಹರಿದಿಲ್ಲ! ಇಸ್ರೇಲ್-ಇರಾನ್ ಯುದ್ಧದ ನಂತರ ಎದುರಾಗಿದ್ದ ಗ್ಯಾಸ್ ಅಭಾವದಿಂದ ಇನ್ನೂ 36,000ಕ್ಕೂ ಹೆಚ್ಚು ಕುಟುಂಬಗಳು ಹೊಸ ಸಂಪರ್ಕಕ್ಕಾಗಿ ಕಾಯುತ್ತಿವೆ. ಬೆಂಗಳೂರಿನಲ್ಲೇ 11,000 ಅರ್ಜಿ ಬಾಕಿ ಇದೆ.

ಈ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಅವರು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದು, ಬಾಕಿ ಅರ್ಜಿಗಳನ್ನು ತಕ್ಷಣ ಅನುಮೋದಿಸುವಂತೆ ಮನವಿ ಮಾಡಿದ್ದಾರೆ.ಯಾಕೆ ಬೇಡಿಕೆ ಜಾಸ್ತಿ ಆಯ್ತು?
ಸಚಿವರು ಪತ್ರದಲ್ಲಿ ತಿಳಿಸಿರುವಂತೆ, ರಾಜ್ಯದಲ್ಲಿ ಜನಸಂಖ್ಯೆ ಹೆಚ್ಚಳ, ಬೆಂಗಳೂರಿನಲ್ಲಿ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಾಗಿರುವುದು ಮತ್ತು ಹೊಸ ಅಪಾರ್ಟ್‌ಮೆಂಟ್‌ಗಳು ನಿರ್ಮಾಣವಾಗುತ್ತಿರುವುದರಿಂದ LPG ಬೇಡಿಕೆ ದುಪ್ಪಟ್ಟಾಗಿದೆ.ಯುದ್ಧದ ಪರಿಣಾಮ ಇನ್ನೂ ಇದೆ
ಪಶ್ಚಿಮ ಏಷ್ಯಾ ಯುದ್ಧದಿಂದ ಇಂಧನ ಪೂರೈಕೆ ಮೇಲೆ ಒತ್ತಡ ಬಿದ್ದು, ಕಳೆದ ತಿಂಗಳು ಸಿಲಿಂಡರ್ ಸಿಗದೆ ಜನರು ಪರದಾಡಿದ್ದರು. ಯುದ್ಧದ ತೀವ್ರತೆ ಕಡಿಮೆಯಾದರೂ ಹೊಸ ಕನೆಕ್ಷನ್ ಸಮಸ್ಯೆ ಹಾಗೇ ಇದೆ.ಸದ್ಯ ಕೇಂದ್ರ ಸರ್ಕಾರ ಈ ಮನವಿಗೆ ಸ್ಪಂದಿಸುತ್ತಾ? 36 ಸಾವಿರ ಕುಟುಂಬಗಳಿಗೆ ಗ್ಯಾಸ್ ಸಿಗುತ್ತಾ? ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *