
ವಾರಣಾಸಿ, ಅ.25: ಪ್ರಧಾನಿ ಮೋದಿ ತಮ್ಮ ಸ್ವಕ್ಷೇತ್ರ ವಾರಣಾಸಿಯಲ್ಲಿ ಇಂದು ಭಾರತೀಯ ವಾಯುಪಡೆಯ ಅಬ್ಬರದ ಏರೋ ಶೋ ವೀಕ್ಷಿಸಿದರು. ಯುಪಿ ಸಿಎಂ ಯೋಗಿ ಆದಿತ್ಯನಾಥ್ ಕೂಡ ಜೊತೆಗಿದ್ದರು.
ಗಂಗೆಯ ಮೇಲಿನ ಆಕಾಶದಲ್ಲಿ ರಫಾಲ್, ಎಲ್ಸಿಎ ತೇಜಸ್, ಸುಖೋಯ್-30MKI ಯುದ್ಧ ವಿಮಾನಗಳು ರೋಚಕ ಕಸರತ್ತು ನಡೆಸಿದವು. ಬ್ರಹ್ಮೋಸ್ ಕ್ಷಿಪಣಿ ಹೊತ್ತ ವಿಮಾನಗಳ ಪ್ರದರ್ಶನ ನೋಡುಗರ ಎದೆ ಝಲ್ ಎನಿಸಿತು.
ವಾಯುಪಡೆಯ ಸೂರ್ಯಕಿರಣ್ ತಂಡದ ವೈಮಾನಿಕ ಸಾಹಸಕ್ಕೆ ಜನರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಭಾರತೀಯ ವಾಯುಪಡೆಯ 96ನೇ ವಾರ್ಷಿಕೋತ್ಸವದ ಅಂಗವಾಗಿ *’ವಿಂಗ್ಸ್ ಓವರ್ ಗ್ಯಾಂಜೆಸ್’* ಥೀಮ್ ನಲ್ಲಿ ಈ ಶೋ ನಡೆದಿದೆ.
ಇದಕ್ಕೂ ಮುನ್ನ ಮೋದಿ ಅವರು ವಾರಣಾಸಿಯಲ್ಲಿ ಮೆಗಾ ರೋಡ್ಶೋ ನಡೆಸಿ, ಅರವಿಂದ್ ಲಿಮಿಟೆಡ್ ನೂತನ ಗಾರ್ಮೆಂಟ್ಸ್ ಘಟಕ ಉದ್ಘಾಟಿಸಿ, ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಇಲ್ಲಿಂದ ನೇರವಾಗಿ ಭುವನೇಶ್ವರಕ್ಕೆ ತೆರಳಿ RBI ಡಾಟಾ ಸೆಂಟರ್ ಉದ್ಘಾಟಿಸಲಿದ್ದಾರೆ.