Headlines

BPL ಕಾರ್ಡ್ ಇದ್ದವರಿಗೆ ಬಿಗ್ ಅಪ್ಡೇಟ್! e-KYC ಗಡುವು ನವೆಂಬರ್ 10ಕ್ಕೆ ವಿಸ್ತರಣೆ, ಮನೆಯಲ್ಲೇ ಮಾಡುವ ವಿಧಾನ ಇಲ್ಲಿದೆ

ಬೆಂಗಳೂರು: ರಾಜ್ಯದ ಕೋಟ್ಯಂತರ ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ.

BPL ಸೇರಿದಂತೆ ಎಲ್ಲಾ ರೇಷನ್ ಕಾರ್ಡ್ ಗಳ e-KYC ಗಡುವನ್ನು ನವೆಂಬರ್ 10, 2026ಕ್ಕೆ ವಿಸ್ತರಿಸಲಾಗಿದೆ. ಈ ಹಿಂದೆ ಕೊನೆ ದಿನಾಂಕ ಅಕ್ಟೋಬರ್ 20 ಆಗಿತ್ತು.ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಈ ಆದೇಶ ಹೊರಡಿಸಿದೆ.

ಯಾರು e-KYC ಮಾಡಬೇಕು?

-1,15,87,298 ಫಲಾನುಭವಿಗಳು 1 ವರ್ಷದ ಹಿಂದೆ e-KYC ಮಾಡಿದ್ದಾರೆ, ಅವರು ಮತ್ತೆ ಮಾಡಬೇಕು- 3,82,362 ಜನ ಎಂದೂ e-KYC ಮಾಡಿಲ್ಲ- 54,27,396 ಜನರ e-KYC 5 ವರ್ಷಕ್ಕಿಂತ ಹಳೆಯದು

ಮನೆಯಲ್ಲೇ e-KYC ಮಾಡುವುದು ಹೇಗೆ?ಸರ್ಕಾರ Anna Seva App ಬಿಡುಗಡೆ ಮಾಡಿದೆ. ಹೊರ ರಾಜ್ಯದಲ್ಲಿ ಕೆಲಸಕ್ಕೆ ಹೋದ ಕನ್ನಡಿಗರು ಕೂಡ ಅಲ್ಲಿಂದಲೇ ಮಾಡಬಹುದು.

1. Play Store ನಿಂದ Anna Seva App ಡೌನ್ಲೋಡ್ ಮಾಡಿ

2. ರೇಷನ್ ಕಾರ್ಡ್ ನಂಬರ್ ಹಾಕಿ

3. ಕುಟುಂಬದ ಎಲ್ಲ ಸದಸ್ಯರ ಆಧಾರ್ ಮೂಲಕ ಫೇಸ್ ಅಥೆಂಟಿಕೇಷನ್ ಮಾಡಿ

4. 2 ನಿಮಿಷದಲ್ಲಿ e-KYC ಪೂರ್ಣಅಥವಾ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಹೋಗಿ ಮಾಡಬಹುದು.

ಮಾಡದಿದ್ದರೆ ಏನಾಗುತ್ತದೆ? ನವೆಂಬರ್ 10ರೊಳಗೆ ಮಾಡದಿದ್ದರೆ ಉಚಿತ ಅಕ್ಕಿ, ಅನ್ನಭಾಗ್ಯ ಹಣ ಸ್ಥಗಿತವಾಗಬಹುದು. ಕಾರ್ಡ್ ರದ್ದಾಗುವ ಭೀತಿಯೂ ಇದೆ.ಕೂಡಲೇ ನಿಮ್ಮ e-KYC ಸ್ಟೇಟಸ್ ಚೆಕ್ ಮಾಡಿ.

Leave a Reply

Your email address will not be published. Required fields are marked *